ಮೈಸೂರು: ಒಡಹುಟ್ಟಿದ 16 ವರ್ಷದ ತಂಗಿಯ ಮೇಲೆ ಕಾಮುಕ ಅಣ್ಣನೊಬ್ಬ ಅತ್ಯಾಚಾರ ನಡೆಸಿ ಆಕೆಯನ್ನು ಗರ್ಭಿಣಿ ಮಾಡಿರುವ ಹೇಯ ಕೃತ್ಯ ಸಾಂಸ್ಕೃತಿಕ ನಗರಿಯಲ್ಲಿ ನಡೆದಿದೆ.
ಮೈಸೂರಿನ ಗಿರಿದರ್ಶಿನಿ ನಗರದಲ್ಲಿ ಈ ಅಮಾನುಷ ಘಟನೆ ನಡೆದಿದ್ದು, ಆರೋಪಿ ವಿನಯ್ ಕುಮಾರ್ನನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದ ಅಪ್ರಾಪ್ತೆ, ಅಣ್ಣನ ಆಶ್ರಯ ಪಡೆದಿದ್ದಳು. ಈಕೆಗೆ ಇಬ್ಬರು ಅಣ್ಣಂದಿರು ಹಾಗೂ ಇಬ್ಬರು ಅಕ್ಕಂದಿರಿದ್ದು, ಅಕ್ಕರಿಗೆ ವಿವಾಹವಾದ ಕಾರಣ ಇಬ್ಬರು ಅಣ್ಣಂದಿರ ಜೊತೆ ಬಾಲಕಿ ಆಶ್ರಯ ಪಡೆದಿದ್ದಳು.
ಇದನ್ನೂ ಓದಿ:ಮಣಿಪುರದಲ್ಲಿ ನಿರ್ಮಾಣವಾಗುತ್ತಿದೆ ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆ ಕಂಬ