ಮೈಸೂರು : ರಾಜಿ ಸಂಧಾನ ವಿಚಾರವಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ತಲಕಾಡು ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಹೆಡ್ ಕಾನ್ಸ್ಟೇಬಲ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಪಿಎಸ್ಐ ಸಿದ್ದಯ್ಯ ಹಾಗೂ ಮುಖ್ಯಪೇದೆ ಸತೀಶ್ ಕುಮಾರ್ ಠಾಣೆಯಲ್ಲೇ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಠಾಣೆಯಲ್ಲಿ ಲಂಚ ಪಡೆಯುವಾಗ ಎಸಿಬಿ ದಾಳಿ: ಬಲೆಗೆ ಬಿದ್ದ ಪಿಎಸ್ಐ, ಹೆಡ್ ಕಾನ್ಸ್ಟೇಬಲ್ - Mysore
ಟ್ಯಾಕ್ಸಿ ಚಾಲಕನ ಎನ್ಸಿಆರ್ ಪ್ರಕರಣ ಮುಕ್ತಾಯಗೊಳಿಸಲು ಪೊಲೀಸ್ ಠಾಣೆಯಲ್ಲೇ ಪಿಎಸ್ಐ ಹಾಗೂ ಮುಖ್ಯಪೇದೆ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಸಿಲುಕಿದ್ದಾರೆ.
![ಠಾಣೆಯಲ್ಲಿ ಲಂಚ ಪಡೆಯುವಾಗ ಎಸಿಬಿ ದಾಳಿ: ಬಲೆಗೆ ಬಿದ್ದ ಪಿಎಸ್ಐ, ಹೆಡ್ ಕಾನ್ಸ್ಟೇಬಲ್ ACB attack while taking bribe in police station in Mysore](https://etvbharatimages.akamaized.net/etvbharat/prod-images/768-512-15744565-thumbnail-3x2-bng.jpg)
ಠಾಣೆಯಲ್ಲಿ ಲಂಚ ಪಡೆಯುವಾಗ ಎಸಿಬಿ ದಾಳಿ
ಠಾಣೆಯಲ್ಲಿ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಪಿಎಸ್ಐ ಮತ್ತು ಹೆಡ್ ಕಾನ್ಸ್ಟೇಬಲ್
ಟ್ಯಾಕ್ಸಿ ಚಾಲಕನ ಎನ್ಸಿಆರ್ ಪ್ರಕರಣ ಮುಕ್ತಾಯಗೊಳಿಸಲು 10 ಸಾವಿರಕ್ಕೆ ಡಿಮ್ಯಾಂಡ್ ಮಾಡಿ ಮುಂಗಡವಾಗಿ 2,500 ಹಣ ಪಡೆದಿದ್ದರು. ಇಂದು ಪಿಎಸ್ಐ 5 ಸಾವಿರ ಹಾಗೂ ಹೆಡ್ ಕಾನ್ಸ್ಟೇಬಲ್ 2,500 ಲಂಚ ಪಡೆಯುವಾಗ ಬಲೆಗೆ ಬಿದ್ದಿದ್ದಾರೆ.
ಇದನ್ನೂ ಓದಿ:ಅನಿಲ್ ಲಾಡ್, ಅವರ ಪತ್ನಿ ಮತ್ತು ವಿ.ಎಸ್.ಲಾಡ್ ಕಂಪನಿ ನಿರ್ದೇಶಕಿಗೆ ಇಡಿ ಸಮನ್ಸ್