ಮೈಸೂರು:ಪೋಷಕರ ಅಗಲಿಕೆಯಿಂದ ತೀವ್ರವಾಗಿ ಮನನೊಂದ ಯುವಕನೋರ್ವ ತನ್ನ ಹುಟ್ಟುಹಬ್ಬದಂದೇ ವಿಷ ಸೇವಿಸಿ ಸಾವಿನ ಹಾದಿ ತುಳಿದಿದ್ದಾನೆ. ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡುತ್ತಿದ್ದ ಎನ್.ಆರ್.ಮೊಹಲ್ಲಾ ನಿವಾಸಿ ಎಸ್.ಕಾರ್ತಿಕ್ (30) ಮೃತ ದುರ್ದೈವಿ.
ಇವರ ತಾಯಿ ಡಾ.ಪಾರ್ವತಿ ಕೆಲವು ವರ್ಷಗಳ ಹಿಂದೆಷ್ಟೇ ಸಾವನ್ನಪ್ಪಿದ್ದರು. ನಂತರ ತಂದೆ ಶಿವಲಿಂಗಯ್ಯ ಕೂಡ ಮೃತಪಟ್ಟಿದ್ದರು. ಚಿಕ್ಕಮ್ಮನ ಆಸರೆಯಲ್ಲಿದ್ದ ಕಾರ್ತಿಕ್, ಕೆಲ ದಿನಗಳ ಹಿಂದಷ್ಟೇ ಎನ್.ಆರ್.ಮೊಹಲ್ಲಾದಲ್ಲಿ ಬಾಡಿಗೆ ರೂಂ ಮಾಡಿ ವಾಸವಾಗಿದ್ದರಂತೆ.
ಹಿಂದೊಮ್ಮೆ ಕಾರ್ತಿಕ್ ತನ್ನ ತಾಯಿ ಸಾವನ್ನಪ್ಪಿದ ದಿನವೇ ವಿಷ ಸೇವಿಸಿದ್ದರು. ಜೊತೆಗೆ ತಂದೆ ಸಾವನ್ನಪ್ಪಿದ ದಿನ ರೈಲಿನಿಂದ ಕೆಳಗೆ ಜಿಗಿದಿದ್ದರು. ಆದರೆ, ಅದೃಷ್ಟವಶಾತ್ ಈ ಎರಡು ಬಾರಿಯು ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ, ಮೂರನೇ ಬಾರಿ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ವಿಷ ಸೇವಿಸಿ ಗುರುವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಬೆಳೆದು ನಿಂತ ಮಗಳ ಮರೆತು 3ನೇ ಮದುವೆಗೆ ಹೊರಟ ಪತಿ; ಗುಪ್ತಾಂಗ ಕತ್ತರಿಸಿ ಕೊಲೆಗೈದ ಧರ್ಮಪತ್ನಿ