ಮೈಸೂರಿನಲ್ಲಿ ಯುವತಿಗೆ ಚಾಕು ಇರಿದಿದ್ದ ಭಗ್ನ ಪ್ರೇಮಿ ಪೊಲೀಸರಿಗೆ ಶರಣು - mysuru crime news
17:53 November 15
ಮೈಸೂರಿನಲ್ಲಿ ಯುವತಿಗೆ ಚಾಕು ಇರಿದಿದ್ದ ಭಗ್ನ ಪ್ರೇಮಿ
ಮೈಸೂರು: ಮದುವೆಯಾಗಲು ನಿರಾಕರಿಸಿದ ಯುವತಿಗೆ ಚಾಕು ಇರಿದು ಪರಾರಿಯಾಗಿದ್ದ ಯುವಕ ತಾನೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಗಗನ್ ಅಲಿಯಾಸ್ ಕೆಂಚ ಪೊಲೀಸರಿಗೆ ಶರಣಾದ ಆರೋಪಿ. ಈತ ಕಳೆದ 5 ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದ, ಜೊತೆಗೆ ಆಕೆಗೆ 18 ವರ್ಷ ತುಂಬಿದ ನಂತರ ವಿವಾಹವಾಗಲು ಕಾಯುತ್ತಿದ್ದನು. ಅದರಂತೆ 18 ವರ್ಷ ಪೂರೈಸಿದ ಯುವತಿಗೆ ಮದುವೆಯ ಪ್ರಸ್ತಾಪವನ್ನ ಮುಂದಿಟ್ಟಿದ್ದ.
ಆದ್ರೆ ಯುವತಿ ಮದುವೆಯಾಗಲು ನಿರಾಕರಿಸಿದ್ದಳು. ಅಲ್ಲದೇ ಈಕೆಯ ಪೋಷಕರು ಕೂಡ ಯುವಕನಿಗೆ ಎಚ್ಚರಿಕೆ ನೀಡಿದ್ದರು. ಡ್ರೈವರ್ ಆಗಿರುವ ನಿನ್ನನ್ನು ಯಾರೂ ಮದುವೆಯಾಗುತ್ತಾರೆ ಎಂದು ಯುವತಿ ನಿಂದಿಸಿದ್ದಳು. ಇದರಿಂದ ಕೋಪಗೊಂಡಿದ್ದ ಕುದಿಯುತ್ತಿದ್ದ ಯುವಕ ಇಂದು ಮನೆ ಮುಂದೆ ಯುವತಿ ಒಬ್ಬಳೆ ನಿಂತಿದ್ದಾಗ ಚಾಕು ಇರಿದು ಪರಾರಿಯಾಗಿದ್ದ. ಆದರೆ ಕಾನೂನಿಗೆ ಹೆದರಿ ಲಕ್ಷ್ಮಿಪುರಂ ಠಾಣೆಗೆ ಬಂದು ಶರಣಾಗಿದ್ದಾನೆ.