ಕರ್ನಾಟಕ

karnataka

ETV Bharat / city

ವಕೀಲೆ ಅನುಮಾನಾಸ್ಪದ ಸಾವು : ಇದು ಆತ್ಮಹತ್ಯೆಯಲ್ಲ ಕೊಲೆ ಎಂದ ಮೃತಳ ಪೋಷಕರು.. ಅತ್ತೆ ನಾಪತ್ತೆ.. - ವರದಕ್ಷಿಣೆ ಕಿರುಕುಳ

ಈ ಕುರಿತು ಸ್ಥಳಕ್ಕೆ ಭೇಟಿ ನೀಡಿದ ಕುವೆಂಪುನಗರ ಠಾಣೆಯ ಇನ್ಸ್​ಪೆಕ್ಟರ್, ಚಂದ್ರಕಲಾ ಪತಿ ಮತ್ತು ಮಾವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಅತ್ತೆ ಪರಾರಿಯಾಗಿದ್ದಾರೆ. ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ವಕೀಲೆ ಚಂದ್ರಕಲಾ
ವಕೀಲೆ ಚಂದ್ರಕಲಾ

By

Published : Mar 12, 2022, 12:10 PM IST

ಮೈಸೂರು: ವಕೀಲೆ ಹಾಗೂ ಮೈಸೂರು ವಕೀಲರ ಸಂಘದ ಸದಸ್ಯರಾದ ಚಂದ್ರಕಲಾ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.

ವಕೀಲೆ ಚಂದ್ರಕಲಾ (32) ಅವರು 2019ರಲ್ಲಿ ರಾಮಕೃಷ್ಣ ನಗರದ ನಿವಾಸಿ ಪ್ರದೀಪ್ ಎಂಬುವರನ್ನು ಪ್ರೀತಿಸಿ ವಿವಾಹವಾಗಿದ್ದರು. ಇವರಿಗೆ ಆರು ತಿಂಗಳ ಒಂದು ಮಗು ಕೂಡ ಇದೆ ಎನ್ನಲಾಗಿದೆ.

ಚಂದ್ರಕಲಾ ದಂಪತಿ

ಇಂದು ಬೆಳಗಿನ ಜಾವ 4.30 ಸುಮಾರಿಗೆ ಪ್ರದೀಪ್, ಚಂದ್ರಕಲಾ ಪೋಷಕರಿಗೆ ಕರೆ ಮಾಡಿ ಮನೆಯ ಬಳಿ ಬರುವಂತೆ ತಿಳಿಸಿದ್ದಾನೆ. ಬಳಿಕ 6 ಗಂಟೆ ಸುಮಾರಿಗೆ ನಿವಾಸದ ಸಮೀಪವಿರುವ ಖಾಸಗಿ ಆಸ್ಪತ್ರೆ ಬಳಿ ಎಂದು ಹೇಳಿದ್ದಾನೆ.

ಇದರಿಂದ ಅನುಮಾನಗೊಂಡ ಮೃತ ಚಂದ್ರಕಲಾ ಪೋಷಕರು ಇದು ಆತ್ಮಹತ್ಯೆಯಲ್ಲ, ಆಕೆಯ ಅತ್ತೆ, ಮಾವ ಮತ್ತು ಪತಿ ಸೇರಿ ವರದಕ್ಷಿಣೆಗಾಗಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ವಕೀಲೆ ಚಂದ್ರಕಲಾ

ಈ ಕುರಿತು ಸ್ಥಳಕ್ಕೆ ಭೇಟಿ ನೀಡಿದ ಕುವೆಂಪುನಗರ ಠಾಣೆಯ ಇನ್ಸ್​ಪೆಕ್ಟರ್, ಚಂದ್ರಕಲಾ ಪತಿ ಮತ್ತು ಮಾವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಅತ್ತೆ ಪರಾರಿಯಾಗಿದ್ದಾರೆ. ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿದ್ದುಕೊಂಡು ನಕಲಿ ದಾಖಲೆ ಸೃಷ್ಟಿಸಿ ರೋಹಿಂಗ್ಯಾಗಳನ್ನು ಭಾರತದೊಳಗೆ ಸೇರಿಸುತ್ತಿದ್ದ ವ್ಯಕ್ತಿ ಸೇರಿ 6 ಮಂದಿ ಬಂಧನ

ABOUT THE AUTHOR

...view details