ಮೈಸೂರು: ಕೌಟುಂಬಿಕ ಕಲಹದಿಂದ ಬೇಸತ್ತು ತಾಯಿ-ಮಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿ.ನರಸೀಪುರ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಂದಿನಿ(35), ಸಿಂಚನ(9) ಆತ್ಮಹತ್ಯೆ ಮಾಡಿಕೊಂಡವರು. ಪತಿಯಿಂದ ಬೇರ್ಪಟ್ಟು ತವರು ಮನೆಯಲ್ಲಿ ವಾಸವಾಗಿದ್ದ ಮಹಿಳೆ, ಕೌಟುಂಬಿಕ ಕಲಹದಿಂದ ಬಹಳಷ್ಟು ಬೇಸರಗೊಂಡಿದ್ದರು ಎಂದು ತಿಳಿದುಬಂದಿದೆ.
ಮೈಸೂರು: ಮಗಳಿಗೆ ವಿಷ ಕೊಟ್ಟು ತಾನೂ ಕುಡಿದ ತಾಯಿ - mysuru crime news
ವಿಷ ಸೇವಿಸಿದ್ದ ತಾಯಿ, ಮಗಳು ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮಗಳಿಗೆ ವಿಷ ಕೊಟ್ಟು ತಾನೂ ಕುಡಿದ ತಾಯಿ
ಇದರಿಂದ ಮನನೊಂದು ಸೋಮವಾರ ಸಂಜೆ ಮನೆಯಲ್ಲಿ ಮಗಳಿಗೆ ಮೊದಲು ವಿಷ ಕೊಟ್ಟು ಬಳಿಕ ತಾನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ವಿಷ ಸೇವಿಸಿದ್ದ ಅಮ್ಮ- ಮಗಳನ್ನು ಕೂಡಲೇ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಇಬ್ಬರೂ ಸಾವನ್ನಪ್ಪಿದ್ದಾರೆ. ಈ ಸಂಬಂಧ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಇದನ್ನೂ ಓದಿ: ಪುಟ್ಟೀರಮ್ಮನ ಸೊಪ್ಪಿನ ಜ್ಞಾನ: 60ಕ್ಕೂ ಹೆಚ್ಚು ಬೆರಕೆ ಸೊಪ್ಪು ಗುರುತಿಸುವ ದೇಸಿ ತಜ್ಞೆ!)