ಕರ್ನಾಟಕ

karnataka

ETV Bharat / city

ಸಾಂಸ್ಕೃತಿಕ ನಗರಿ ವ್ಯಕ್ತಿಗೆ ಸೋಂಕು ದೃಢ...ಎಚ್ಚೆತ್ತುಕೊಳ್ಳಲು ಜಿಲ್ಲಾಡಳಿತ ಸೂಚನೆ - Infection detection in Mysore

ಆತನಿಗೆ ಚಿಕಿತ್ಸೆ ನೀಡಿದ ವೈದ್ಯರ ಮಾಹಿತಿ ಹಾಗೂ ಏರ್ ಇಂಡಿಯಾ ವಿಮಾನದಲ್ಲಿ ಬಂದ ಪ್ರಯಾಣಿಕರ ಮಾಹಿತಿಯನ್ನೂ ಕಲೆ ಹಾಕಲಾಗುತ್ತಿದೆ. ಮಾಹಿತಿ ಸಿಕ್ಕ ಆಯಾಯ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

a-person-is-infected-in-a-mysore
ಜಿಲ್ಲಾಧಿಕಾರಿ ಅಭಿರಾಮ್​ ಜಿ.ಶಂಕರ್

By

Published : Mar 21, 2020, 11:59 PM IST

ಮೈಸೂರು: ಕೋವಿಡ್-19 ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವ್ಯಕ್ತಿಯೊಬ್ಬನಿಗೆ ಸೋಂಕು ತಗುಲಿರುವುದು ದೃಢವಾಗಿದ್ದು, ಸಾರ್ವಜನಿಕರು ಎಚ್ಚೆತ್ತುಕೊಳ್ಳಲು ಜಿಲ್ಲಾಡಳಿತ ಸೂಚನೆ ನೀಡಿದೆ. ತುರ್ತು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಮ್​ ಜಿ.ಶಂಕರ್ ಅವರು, ನಗರದ 35 ವರ್ಷದ ವ್ಯಕ್ತಿಯೊಬ್ಬರು ದುಬೈನಿಂದ ಮಾ.19ರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ್ದಾರೆ. ಅವರಿಗೆ ಸ್ಕ್ರೀನಿಂಗ್ ಮಾಡಲಾಗಿದ್ದು, ಅಲ್ಲಿಂದ ಟ್ಯಾಕ್ಸಿ ಮೂಲಕ ಮೈಸೂರಿಗೆ ಬಂದಿದ್ದಾರೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಅಭಿರಾಮ್​ ಜಿ.ಶಂಕರ್

ಜ್ವರ ಕಾಣಿಸಿಕೊಂಡ ಪರಿಣಾಮ ಮನೆಗೆ ಹೋಗದೆ ನೇರವಾಗಿ ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದಾರೆ. ವ್ಯಕ್ತಿಯ ರಕ್ತ ಮತ್ತು ಗಂಟಲು ದ್ರವದ ಮಾದರಿ ವರದಿ ಬಂದ ಬಳಿಕ ಸೋಂಕು ಇರುವುದು ದೃಢ ಆಗಿದೆ. ಆತನಿಗೆ ಕೆ.ಆರ್.ಆಸ್ಪತ್ರೆಯ ಐಸೋಲೇಷನ್​ ವಾರ್ಡ್​​​ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ನೇರವಾಗಿ ಆಸ್ಪತ್ರೆಗೆ ದಾಖಲಾದ ಪರಿಣಾಮ ಅವರ ಮನೆಯವರಿಗೆ ಆತ ಮಾಹಿತಿ ನೀಡಿಲ್ಲ. ಈಗಾಗಲೇ ಟ್ಯಾಕ್ಸಿ ಚಾಲಕನ ಮಾಹಿತಿ ಸಿಕ್ಕಿದ್ದು, ತಪಾಸಣೆ ಮಾಡಿಸಲಾಗುವುದು ಎಂದರು.

  • ಮೈಸೂರಿನಲ್ಲಿ ನಿಗಾದಲ್ಲಿದ್ದವರ ಸಂಖ್ಯೆ 240
  • ಮನೆಯಲ್ಲಿ ನಿಗಾದಲ್ಲಿದ್ದವರ ಸಂಖ್ಯೆ 170
  • 14 ದಿನ ನಿಗಾ ಮುಗಿಸಿದವರು 69 ಮಂದಿ

ABOUT THE AUTHOR

...view details