ಕರ್ನಾಟಕ

karnataka

ETV Bharat / city

ಮೈಸೂರಿನಲ್ಲಿ ಕತ್ತು ಕೊಯ್ದು ವ್ಯಕ್ತಿಯ ಬರ್ಬರ ಕೊಲೆ - death

ಗುಜರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹಮೀದ್ ಎನ್ನುವವರನ್ನು ಯಾರೋ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ. ಈ ಹಿಂದೆ ಬೇರೊಂದು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಹಮೀದ್ ನನ್ನು ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

hameed murder case
ಮೈಸೂರಿನ ಹಮೀದ್ ಕೊಲೆ ಪ್ರಕರಣ

By

Published : Oct 13, 2021, 5:28 PM IST

Updated : Oct 13, 2021, 6:50 PM IST

ಮೈಸೂರು: ವ್ಯಕ್ತಿಯ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಮೀದ್ (40) ಕೊಲೆಯಾಗಿರುವ ವ್ಯಕ್ತಿ.

ಕತ್ತು ಕೊಯ್ದು ವ್ಯಕ್ತಿಯ ಬರ್ಬರ ಕೊಲೆ

ಗುಜರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹಮೀದ್ ಮಂಗಳವಾರ ರಾತ್ರಿ ಮನೆಯಿಂದ ಹೋಗಿದ್ದ ಸಂದರ್ಭದಲ್ಲಿ ಕತ್ತು ಕೊಯ್ದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಕೊಲೆ ಮಾಡಿ ಪಾರ್ಕ್‌ ಪಕ್ಕದ ಖಾಲಿ ಜಾಗದಲ್ಲಿ ಮೃತದೇಹ ಹಾಕಿದ್ದಾರೆ. ಮೃತದೇಹ ನೋಡಿ ಬೆಚ್ಚಿಬಿದ್ದ ಉದಯಗಿರಿ ಜನರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಉದಯಗಿರಿ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು‌.

ಇದನ್ನೂ ಓದಿ:IT Raid.. ಆಕ್ರೋಶದಲ್ಲಿ BSY ಪಡೆ, ಸೇಡು ತೀರಿಸಿಕೊಂಡ ಸಂತಸದಲ್ಲಿ ವಿರೋಧಿ ಬಣ!

ಈ ಹಿಂದೆ ಬೇರೊಂದು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಹಮೀದ್ ನನ್ನು ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Last Updated : Oct 13, 2021, 6:50 PM IST

ABOUT THE AUTHOR

...view details