ಕರ್ನಾಟಕ

karnataka

ETV Bharat / city

ಕಾಡುಮೊಲ ಎಂದು ಭಾವಿಸಿ ಸ್ನೇಹಿತನಿಗೆ ಗುಂಡು ಹಾರಿಸಿದ ಕಾರ್ಮಿಕ : ಚಿಕಿತ್ಸೆ ಫಲಿಸದೇ ಸಾವು - ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಸ

ಕೇರಳದಿಂದ ಇಲ್ಲಿ ಕೆಲಸಕ್ಕಾಗಿ ಬಂದಿದ್ದ ಕಾರ್ಮಿಕ ತನ್ನದೇ ಸ್ನೇಹಿತನ ಗುಂಡಿಗೆ ಬಲಿಯಾಗಿದ್ದಾನೆ. ಮೊಲ ಎಂದು ಭಾವಿಸಿ ಸ್ಬೇಹಿತನ ಮೇಲೆ ಗುಂಡು ಹಾರಿಸಿದ್ದು, ಗಾಯಗೊಂಡಿದ್ದ ಕಾರ್ಮಿಕ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾನೆ.

 A man killed his friend in mysore
A man killed his friend in mysore

By

Published : Jun 17, 2021, 4:22 PM IST

ಮೈಸೂರು: ಕಾಡುಮೊಲದ ಬೇಟೆಯ ಸಮಯದಲ್ಲಿ ಗುರಿತಪ್ಪಿದ ಗುಂಡು ಸ್ನೇಹಿತನಿಗೆ ತಗುಲಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಜರುಗಿದೆ. ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಸಮೀಪದ ಕಾರ್ಯ ಎಂಬ ಗ್ರಾಮದಲ್ಲಿ ಘಟನೆ ನಡೆದಿದೆ.
ಕೇರಳದ ಸುಲ್ತಾ‌ನ್ ಬತ್ತೇರಿ ಪಡಿಚರ ಗ್ರಾಮದ ಎಂ.ಎಸ್.ಪ್ರಸನ್ನ ಅಲಿಯಾಸ್ ಮೋಹನ್ ( 58 ) ಎಂಬುವವ ತನ್ನ ಸ್ನೇಹಿತ ಹಾರಿಸಿದ ಗುಂಡಿಗೆ ಬಲಿಯಾದ ವ್ಯಕ್ತಿ.

ಏನಿದು ಘಟನೆ?

ಪ್ರಸನ್ನ ಅಲಿಯಾಸ್ ಮೋಹನ್ ಮೂಲತಃ ಕೇರಳದವರಾಗಿದ್ದು , ಇವನು ಕುರಿಹುಂಡಿ ಗ್ರಾಮದಲ್ಲಿ ಗುತ್ತಿಗೆ ಪಡೆದಿದ್ದ ಶುಂಠಿ ತೋಟದಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು.

ತನ್ನ ಸ್ನೇಹಿತ ತಾಲೂಕಿನ ಕುತ್ತುವಾಡಿ ಗ್ರಾಮದ ನಿಶಾದ್ ಎಂಬಾತನ ಮನೆಗೆ ಊಟಕ್ಕಾಗಿ ರಾತ್ರಿ ಸುಮಾರು 8:30ಕ್ಕೆ ತೆರೆಳಿದ್ದಾನೆ . ಅದೇ ವೇಳೆ ನಿಶಾದ್ ಕಾಡುಮೊಲದ ಬೇಟೆಯಾಡಲು ನಾಡ ಬಂದೂಕಿನೊಂದಿಗೆ ಪಕ್ಕದ ಜಮೀನಿಗೆ ತೆರಳಿದ್ದಾನೆ. ದುರಂತ ಎಂಬಂತೆ ಪ್ರಸನ್ನ ಬರುತ್ತಿದ್ದನ್ನು ಗಮನಿಸಿ ಕಾಡುಮೊಲವೆಂದು ಭಾವಿಸಿ ಗುಂಡು ಹಾರಿಸಿದ್ದಾನೆ .

ತೀವ್ರವಾಗಿ ಗಾಯಗೊಂಡ ಪ್ರಸನ್ನನ್ನು ನಗರದ ಕೆ.ಆರ್.ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಪ್ರಸನ್ನ ಸಾವಿಗೀಡಾಗಿದ್ದಾನೆ. ಈ ಸಂಬಂಧ ಹುಲ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಿಶಾದ್ ಪರಾರಿಯಾಗಿದ್ದಾನೆ‌.

ABOUT THE AUTHOR

...view details