ಕರ್ನಾಟಕ

karnataka

ETV Bharat / city

ನಂಜುಂಡೇಶ್ವರ ದೇವಾಲಯದ ಬಳಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ - ನಂಜುಂಡೇಶ್ವರ ದೇವಾಲಯದ ಸಮೀಪ ಆತ್ಮಹತ್ಯೆ

ನಂಜುಂಡೇಶ್ವರ ದೇವಾಲಯದ ಸಮೀಪ ಇರುವ ದಾಸೋಹ ಭವನದ ಬಳಿಯ ಮರದಲ್ಲಿ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

mysore suicide case
ಮೈಸೂರು ಆತ್ಮಹತ್ಯೆ ಪ್ರಕರಣ

By

Published : Sep 26, 2021, 12:38 PM IST

Updated : Sep 26, 2021, 12:52 PM IST

ಮೈಸೂರು: ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಸಮೀಪ ಇರುವ ದಾಸೋಹ ಭವನದ ಬಳಿ ಮರದಲ್ಲಿ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮರವೊಂದಕ್ಕೆ ಬಿಳಿ ಬಟ್ಟೆಯಿಂದ ನೇಣು ಬಿಗಿದುಕೊಂಡು ಓರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದ್ದು, ಈ ವ್ಯಕ್ತಿ ಯಾರು? ಇಲ್ಲಿಗೆ ಬಂದು ಏಕೆ ಆತ್ಮಹತ್ಯೆ ಮಾಡಿಕೊಂಡ? ಎಂಬ ಬಗ್ಗೆ ಮಾಹಿತಿ ಗೊತ್ತಾಗಿಲ್ಲ. ಸ್ಥಳಕ್ಕೆ ನಂಜನಗೂಡು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ನಂಜುಂಡೇಶ್ವರ ಸನ್ನಿಧಿಯಲ್ಲಿ ಪ್ರಾಣತ್ಯಾಗ ಮಾಡಿದರೆ ಮುಕ್ತಿ ಸಿಗುತ್ತದೆ ಎಂಬ ನಂಬಿಕೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ. ದೇವಾಲಯದ ಸುತ್ತಮುತ್ತ ಹಾಗೂ ಕಪಿಲಾ ನದಿಯ ದಡದಲ್ಲಿ ಈ ರೀತಿಯ ಆತ್ಮಹತ್ಯೆಗಳು ಸಂಭವಿಸುತ್ತಿರುತ್ತವೆ.‌

ಇದನ್ನೂ ಓದಿ:ಬೆಂಗಳೂರಿನಲ್ಲಿ ಕಾರು ಅಪಘಾತ: ಡ್ರಂಕ್ & ಡ್ರೈವ್ ಶಂಕೆ-ಚಾಲಕ ಪೊಲೀಸ್ ವಶಕ್ಕೆ

ಈ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಸ್ಥಳ ದೇವಾಲಯದ ಸಮೀಪ ಇರುವುದರಿಂದ ಕೆಲವು ಕಾಲ ನಂಜುಂಡೇಶ್ವರನಿಗೆ ಪೂಜೆ ಮತ್ತು ಅಭಿಷೇಕವನ್ನು ಸ್ಥಗಿತಗೊಳಿಸಲಾಗಿತ್ತು. ಶವವನ್ನು ಸಾಗಿಸಿದ ನಂತರ ದೇವಾಲಯವನ್ನು ಸ್ವಚ್ಛಗೊಳಿಸಿ ಪುನಃ ಪೂಜೆಯನ್ನು ದೇವಾಲಯದಲ್ಲಿ ಆರಂಭಿಸಲಾಯಿತು.

Last Updated : Sep 26, 2021, 12:52 PM IST

ABOUT THE AUTHOR

...view details