ಕರ್ನಾಟಕ

karnataka

ETV Bharat / city

ಮೈಸೂರಲ್ಲಿ ಪೊಲೀಸ್ ತಪಾಸಣೆ ವೇಳೆ ಹಾವು ಹಿಡಿದು ಬಂದ ವ್ಯಕ್ತಿ!! - ಮುಂದೇನಾಯ್ತು ನೋಡಿ - ಪೊಲೀಸ್ ಬೈಕ್ ತಪಾಸಣೆ ವೇಳೆಯಲ್ಲಿ ಡಬ್ಬದಲ್ಲಿ ಹಾವನ್ನು ಹಿಡಿದುಕೊಂಡು ಬಂದ ಘಟನೆ

ಬೈಕ್ ನಲ್ಲಿ ಬಂದ ಸ್ನೇಕ್ ಕುಮಾರ್ ಡಬ್ಬದಲ್ಲಿ ಹಾವನ್ನು ಹಿಡಿದುಕೊಂಡು ಬಂದಿದ್ದ. ತಪಾಸಣೆ ನಡೆಸುತ್ತಿದ್ದ ಪೊಲೀಸರು ಆತನನ್ನು ತಡೆದು ಎಲ್ಲಿಗೆ ಹೋಗುತ್ತಿದ್ದಿಯಾ ಎಂದು ಪ್ರಶ್ನಿಸಿದ್ದಾರೆ. ಕಾಡಿಗೆ ಎಂದು ಸ್ನೇಕ್​ ಕುಮಾರ್​ ಪ್ರತಿಕ್ರಿಯಿಸಿದಾಗ, ಪೊಲೀಸರು ಬ್ಯಾರಿಕೇಡ್​ ತೆಗೆದು ದಾರಿ ಮಾಡಿಕೊಟ್ಟಿದ್ದಾರೆ.

snake
snake

By

Published : May 11, 2021, 4:55 PM IST

Updated : May 11, 2021, 6:43 PM IST

ಮೈಸೂರು:ಪೊಲೀಸ್ ಬೈಕ್ ತಪಾಸಣೆ ವೇಳೆ ಡಬ್ಬದಲ್ಲಿ ವ್ಯಕ್ತಿವೋರ್ವ ಹಾವನ್ನು ಹಿಡಿದುಕೊಂಡು ಬಂದ ಘಟನೆ ನಗರದ ಆರ್ಡಿಂಝು ಸರ್ಕಲ್​ನಲ್ಲಿ ನಡೆದಿದೆ.

ಎರಡನೇ ದಿನದ ಲಾಕ್​ಡೌನ್​ನಲ್ಲಿ ಪೊಲೀಸರು ಇಂದು ಸಹ ತಪಾಸಣೆ ಮುಂದುವರಿಸಿದ್ದು, ನಗರದ ಆರ್ಡಿಂಝ್ ಸರ್ಕಲ್ ಬಳಿ ವಾಹನ ತಪಾಸಣೆ ನಡೆಸುವಾಗ ಇದೇ ಸಮಯದಲ್ಲಿ ಬೈಕ್​ನಲ್ಲಿ ಬಂದ ಸ್ನೇಕ್ ಕುಮಾರ್ ಡಬ್ಬದಲ್ಲಿ ಹಾವನ್ನು ಹಿಡಿದುಕೊಂಡು ಬಂದಿದ್ದ. ಪೊಲೀಸರು ಎಲ್ಲಿಗೆ ಹೋಗುತ್ತಿದ್ದಿಯಾ ಎಂದು ಪ್ರಶ್ನಿಸಿದಾಗ ಕಾಡಿಗೆ ಎಂದು ಉತ್ತರಿಸಿದ್ದ. ಏಕೆ ಎಂದು ಕೇಳಿದ ಪೊಲೀಸರಿಗೆ ಹಾವಿನ ಡಬ್ಬ ತೋರಿಸಿ, ಇದನ್ನು ಕಾಡಿಗೆ ಬಿಡಲು ಎಂದು ತಿಳಿಸಿದ. ತಕ್ಷಣ ಶಾಕ್ ಆದ ಪೊಲೀಸರು ಬ್ಯಾರಿಕೇಡ್ ತೆಗೆದು ಹೋಗಲು ದಾರಿ ಮಾಡಿ ಕೊಟ್ಟರು.

ಹಾವು ಹಿಡಿದು ತಂದ ಸ್ನೇಕ್​ ಕುಮಾರ್​ಗೆ ದಾರಿ ಬಿಟ್ಟ ಪೊಲೀಸರು

ತುರ್ತು ಪರಿಸ್ಥಿತಿ ಹೊರತುಪಡಿಸಿ, ಯಾವುದೇ ಸಂದರ್ಭದಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲವೆಂದು ಸರ್ಕಾರ ಹೇಳಿದೆ. ಬೇರೆ ವಿಧಿಯಿಲ್ಲದೆ ಪೊಲೀಸರು ಸ್ನೇಕ್​ ಕುಮಾರ್​ಗೆ ಕಾಡಿಗೆ ತೆರಳಿ ಹಾವನ್ನು ಬಿಟ್ಟು ಬರಲು ಅವಕಾಶ ನೀಡಿದ್ದಾರೆ.

Last Updated : May 11, 2021, 6:43 PM IST

For All Latest Updates

ABOUT THE AUTHOR

...view details