ಮೈಸೂರು :ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತ ಗೃಹಿಣಿ, ತನ್ನ ಎರಡು ಮಕ್ಕಳಿಗೂ ನೇಣು ಬಿಗಿದು ಆಕೆಯು ನೇಣಿಗೆ ಶರಣಾಗಿರುವ ಘಟನೆ ತಿ.ನರಸೀಪುರ ತಾಲೂಕಿನ ರಾಮೇಗೌಡನಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸರೋಜಾ (32) ಆತ್ಮಹತ್ಯೆಗೆ ಶರಣಾಗಿ, ತನ್ನ ಇಬ್ಬರು ಮಕ್ಕಳಾದ ಗೀತಾ(6), ಕುಸುಮಾಗೂ (4) ನೇಣು ಬಿಗಿದಿದ್ದಾಳೆ.
ತಿ.ನರಸೀಪುರ ತಾಲೂಕಿನ ಮಾವಿನಹಳ್ಳಿ ಗ್ರಾಮದ ನಿಂಗರಾಜು ಎಂಬುವರನ್ನು ಸರೋಜಾ ವಿವಾಹವಾಗಿದ್ದರು. ಗಂಡ ನಿಂಗರಾಜುಗೆ ಅಕ್ರಮ ಸಂಬಂಧ ಇರುವ ವಿಷಯಕ್ಕೆ ಪದೇ ಪದೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಗಂಡನ ಮನೆಯಿಂದ ಸ್ವಗ್ರಾಮ ರಾಮೇಗೌಡನಪುರ ಆಗಮಿಸಿದ್ದ ಸರೋಜಾ, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ.