ಕರ್ನಾಟಕ

karnataka

ETV Bharat / city

ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ.. ಕುಸಿದ ಬಿದ್ದ ಪ್ರತಿಭಟನಾ ನಿರತ ರೈತ - ಕುಸಿದು ಬಿದ್ದ ತಿ ನರಸೀಪುರ ರೈತ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಭಟನಾ ನಿರತರನ್ನು ಬಂಧಿಸಲು ಪೊಲೀಸರು ಮುಂದಾದರು..

a-farmer-fell-ill-while-protesting-against-land-reform-act-in-t-narasipura
ರೈತಬಿದ್ದ ರೈತ

By

Published : Sep 28, 2020, 5:37 PM IST

ಮೈಸೂರು :ಪ್ರತಿಭಟನೆ ವೇಳೆ ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ ನಡೆಯುತ್ತಿದ್ದ ಸಂದರ್ಭದಲ್ಲಿ ರೈತನೊಬ್ಬ ಅಸ್ವಸ್ಥನಾಗಿ ಕುಸಿದು ಬಿದ್ದ ಘಟನೆ ತಿ.ನರಸೀಪುರದಲ್ಲಿ ನಡೆದಿದೆ.

ಕುಸಿದ ಬಿದ್ದ ಪ್ರತಿಭಟನಾ ನಿರತ ರೈತ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಭಟನಾ ನಿರತರನ್ನು ಬಂಧಿಸಲು ಪೊಲೀಸರು ಮುಂದಾದರು. ಈ ವೇಳೆ ಗುರುಸ್ವಾಮಿ ಎಂಬ ರೈತ ಅಸ್ವಸ್ಥನಾಗಿ ನೆಲಕ್ಕೆ ಬಿದ್ದರು.

ಇದರಿಂದ, ರೈತರು ಮತ್ತಷ್ಟು ಆಕ್ರೋಶಗೊಂಡ ಹಿನ್ನೆಲೆ ಲಘು ಲಾಠಿ ಪ್ರಹಾರ ಮಾಡಿ ಪ್ರತಿಭಟನಾಕಾರರನ್ನು ಚದುರಿಸಲಾಯಿತು. ರೈತ ಮುಖಂಡ ಶಂಕರ್, ಪೊಲೀಸರು ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ABOUT THE AUTHOR

...view details