ಕರ್ನಾಟಕ

karnataka

ETV Bharat / city

ಮ್ಯಾನ್ ಹೋಲ್‌ಗೆ ಇಳಿದಿದ್ದ ಪೌರ ಕಾರ್ಮಿಕ ಸಾವು - civilian worker died in Mysore

ಬಲವಂತವಾಗಿ ಪೌರಕಾರ್ಮಿನನ್ನ ಮ್ಯಾನ್ ಹೋಲ್​​ಗೆ ಇಳಿಸಲಾಗಿದೆ ಎಂದು ಆರೋಪಿಸಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಧು ಶವ ತಂದಿಟ್ಟು ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ..

a civilian worker who climb down into manhole died in Mysore
ಮ್ಯಾನ್ ಹೋಲ್‌ಗೆ ಇಳಿದಿದ್ದ ಪೌರ ಕಾರ್ಮಿಕ ಸಾವು

By

Published : Dec 20, 2021, 5:41 PM IST

ಮೈಸೂರು : ಕಳೆದ ಎರಡು ದಿನದ ಹಿಂದೆ ಮ್ಯಾನ್ ಹೋಲ್​​​ಗೆ ಇಳಿದು ಅಸ್ವಸ್ಥಗೊಂಡಿದ್ದ ಯುವಕ ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮಧು (27) ಎಂಬಾತ ಮೃತಪಟ್ಟವರು. ಪಿರಿಯಾಪಟ್ಟಣದ ವಾರ್ಡ್ ನಂ.10ರಲ್ಲಿ ಮ್ಯಾನ್ ಹೋಲ್ ಸ್ವಚ್ಛತೆಗೆ ಇಳಿದಿದ್ದ ಪೌರಕಾರ್ಮಿಕ ಮಧು, ಉಸಿರಾಟದಿಂದ ಅಸ್ವಸ್ಥರಾಗಿದ್ದರು. ಅವರನ್ನು‌ ಪಿರಿಯಾಪಟ್ಟಣದಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಆದರೆ, ಆತ ಇದೀಗ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ತಪ್ಪಿಸಿಕೊಂಡು ಹೋಗುವಾಗ ಸ್ಕೈವಾಕ್​​ನಿಂದ ಬಿದ್ದು ಸಾವು

ಬಲವಂತವಾಗಿ ಪೌರಕಾರ್ಮಿನನ್ನ ಮ್ಯಾನ್ ಹೋಲ್​​ಗೆ ಇಳಿಸಲಾಗಿದೆ ಎಂದು ಆರೋಪಿಸಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಧು ಶವ ತಂದಿಟ್ಟು ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ. ಸಾವಿಗೆ ಕಾರಣರಾದ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ಮೃತನ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

ABOUT THE AUTHOR

...view details