ಕರ್ನಾಟಕ

karnataka

ETV Bharat / city

ನನಗೆ ತಿನ್ನಲು ಬಿಸ್ಕತ್ತು, ಚಾಕೊಲೇಟ್, ನೀರು ಕೊಟ್ಟರು.. ಕಿಡ್ನ್ಯಾಪ್​ ಬಗ್ಗೆ ಮಾಹಿತಿ ಬಿಚ್ಚಿಟ್ಟ ಬಾಲಕ! - ಮೈಸೂರಿನಲ್ಲಿ ವೈದ್ಯ ಪುತ್ರನ ಕಿಡ್ನಾಪ್

ವೈದ್ಯ ದಂಪತಿಗಳ 12 ವರ್ಷದ ಮಗನನ್ನು ಅಪಹರಣಕಾರರಿಂದ ರಕ್ಷಿಸಲ್ಪಟ್ಟಿದ್ದು, ಆತ ಅಪಹರಣ ಹೇಗೆ ಆಯಿತು. ಎಲ್ಲೆಲ್ಲಿ ಕರೆದುಕೊಂಡು ಹೋದರು.. ಯಾವ ರೀತಿ ಧಮ್ಕಿ ಹಾಕಿದರು ಎನ್ನುವ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ.

boy reveal kidnap matter in Mysore, Mysore crime news, Doctor son kidnap in Mysore, Doctor son rescue from kidnappers by Mysore police, ಮೈಸೂರಿನಲ್ಲಿ ಕಿಡ್ನಾಪ್ ವಿಷಯ ಬಯಲು ಮಾಡಿದ ಬಾಲಕ, ಮೈಸೂರು ಅಪರಾಧ ಸುದ್ದಿ, ಮೈಸೂರಿನಲ್ಲಿ ವೈದ್ಯ ಪುತ್ರನ ಕಿಡ್ನಾಪ್, ಮೈಸೂರು ಪೊಲೀಸರಿಂದ ಅಪಹರಣಕಾರರಿಂದ ವೈದ್ಯ ಪುತ್ರನ ರಕ್ಷಣೆ,
ಕಿಡ್ನ್ಯಾಪ್​ ಬಗ್ಗೆ ಮಾಹಿತಿ ಬಿಚ್ಚಿಟ್ಟ ಬಾಲಕ!

By

Published : Jun 24, 2022, 12:31 PM IST

ಮೈಸೂರು: ವೈದ್ಯ ದಂಪತಿಗಳ ಮಗನನ್ನು ಅಪಹರಣಕಾರರು ಎಲ್ಲೆಲ್ಲಿ ಕರೆದುಕೊಂಡು ಹೋದರು, ಯಾವ ರೀತಿ ಧಮ್ಕಿ ಹಾಕಿದರು ಎನ್ನುವ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ.

ನಗರದ ಬೆಮೆಲ್ ವೈದ್ಯ ದಂಪತಿಗಳ 12 ವರ್ಷದ ಬಾಲಕ ಅಭಿಜಿತ್ ಮಾಧ್ಯಮಗಳಿಗೆ ಮಾತನಾಡುತ್ತಾ, ನಾನು ಸೈಕಲ್​ನಲ್ಲಿ ಹೋಗುತ್ತಿರುವಾಗ ಕಾರಿನಲ್ಲಿ ಬಂದ ಅಪಹರಣಕಾರರು ನನ್ನನ್ನು ಅಪಹರಿಸಿದ್ದರು. ಬಳಿಕ ನನ್ನನ್ನು ಮೈಸೂರು ಒಳಭಾಗದ ನಿರ್ಜನ ಪ್ರದೇಶಕ್ಕೆ ಕರೆದೊಯ್ದರು. ಕಾರಿನ ಹಿಂಭಾಗದಲ್ಲಿ ನನ್ನನ್ನು ಕುರಿಸಿದ್ದರು. ಈ ವೇಳೆ, ಕಾರಿನಲ್ಲಿ ಡೀಸೆಲ್ ಕಡಿಮೆ ಇದೆ, ಐದಾರು ಕಿ.ಮೀ ಮಾತ್ರ ಹೋಗಬಹುದು ಎಂದು ಅವರು ಮಾತನಾಡಿಕೊಳ್ಳುತ್ತಿದ್ದರು ಎಂದು ಅಭಿಜಿತ್​ ಮಾಹಿತಿ ನೀಡಿದರು.

ಓದಿ:ವೈದ್ಯ ದಂಪತಿ ಮಗನ ಕಿಡ್ನಾಪ್​ ಪ್ರಕರಣ: ಚಾಣಾಕ್ಷತನದಿಂದ ಬಾಲಕನ ರಕ್ಷಣೆ

ಪ್ರಾರಂಭದಲ್ಲಿ ನನಗೆ ಹೆದರಿಕೆಯಾಯಿತು. ಆದರೆ ಅನಂತರ ನಾನು ಅವರ ಜೊತೆ ಹೊಂದಿಕೊಂಡೆ. ನನಗೆ ತಿನ್ನಲು ಬಿಸ್ಕತ್ತು, ಚಾಕೊಲೇಟ್ ಮತ್ತು ಕುಡಿಯಲು ನೀರು ಕೊಟ್ಟರು. ಆದ್ರೆ ನಾನು ತೆಗೆದುಕೊಳ್ಳಲಿಲ್ಲ. ಅಪಹರಣಕಾರರು ನೀನು ಈ ವಿಚಾರವನ್ನ ನಿಮ್ಮ ಅಪ್ಪ-ಅಮ್ಮನಿಗೆ ಹೇಳಿದರೆ ನಿನ್ನನ್ನ ಶಾಲೆಯಿಂದಲೇ ಕರೆದುಕೊಂಡು ಹೋಗಿ ಮರ್ಡರ್ ಮಾಡುತ್ತೇವೆ ಎಂದು ಹೆದರಿಸಿದರು ಅಂತಾ ಅಪಹರಣಕೊಳ್ಳಗಾದ ಅಭಿಜಿತ್​ ವಿವರಿಸಿದರು.

ABOUT THE AUTHOR

...view details