ಕರ್ನಾಟಕ

karnataka

ETV Bharat / city

ಮೈಸೂರು ವಿವಿ ಕ್ಯಾಂಪಸ್ ಸುತ್ತ 730 ಕ್ಯಾಮೆರಾಗಳ ಸರ್ಪಗಾವಲು!

ಮೈಸೂರು ವಿವಿ ಆವರಣದ ಸುತ್ತ 730 ಇಂಟಲಿಜೆಂಟ್ ವಿಡಿಯೋ ಸರ್ವೆಲೆನ್ಸ್ ಸಿಸ್ಟಮ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

730 Surveillance Camera around  Mysore University campus
ಮೈಸೂರು ವಿವಿ ಕ್ಯಾಂಪಸ್ ಸುತ್ತ 730 ಸರ್ವೆಲೆನ್ಸ್ ಕ್ಯಾಮೆರಾಗಳ ಕಣ್ಣು!

By

Published : Aug 13, 2020, 7:17 PM IST

ಮೈಸೂರು:ಭದ್ರತೆ ಹಾಗೂ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಮಾನಸ ಗಂಗೋತ್ರಿ ಆವರಣದಲ್ಲಿ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಇಂಟಲಿಜೆಂಟ್ ವಿಡಿಯೋ ಸರ್ವೆಲೆನ್ಸ್ ಸಿಸ್ಟಮ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಮೈಸೂರು ವಿವಿ ಕ್ಯಾಂಪಸ್ ಸುತ್ತ 730 ಸರ್ವೆಲೆನ್ಸ್ ಕ್ಯಾಮೆರಾಗಳ ಕಣ್ಣು!

ಮಾನಸ ಗಂಗೋತ್ರಿಯ 600 ಎಕರೆ ಪ್ರದೇಶದಲ್ಲಿ ಸ್ನಾತಕೋತ್ತರ, ಎಂಪಿಎಲ್, ಪಿಹೆಚ್​ಡಿ ಅಧ್ಯಯನ ಸೇರಿ ವಿವಿಧ ಅಧ್ಯಯನ ಕೇಂದ್ರಗಳಿದ್ದು, ಇಲ್ಲಿಗೆ ಬರುವ ವಿದ್ಯಾರ್ಥಿಗಳು ರ್ಯಾಗಿಂಗ್, ಪ್ರತಿಭಟನೆ, ಗಲಾಟೆಯಲ್ಲಿಯೂ ತೊಡಗಿಕೊಳ್ಳುತ್ತಾರೆ. ಹೀಗಾಗಿ ಕರ್ನಜೆನ್ಸ್ ಸಿಸ್ಟಮ್ ಸಂಸ್ಥೆಯಿಂದ ಪ್ರತಿಯೊಂದು ರಸ್ತೆ, ಅಧ್ಯಯನ ಕೇಂದ್ರಗಳ ಆವರಣ ಹಾಗೂ ಆಗಮನ, ನಿರ್ಗಮನ ಗೇಟ್​ಗಳಲ್ಲಿ 730 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಇನ್ನು, ಮೂರು ವರ್ಷ ಈ ಸಂಸ್ಥೆಯೇ ಕ್ಯಾಮೆರಾಗಳನ್ನು ನಿರ್ವಹಣೆ ಮಾಡಲಿದ್ದು, ಎಲ್ಲ ಕ್ಯಾಮೆರಾಗಳ‌ ದೃಶ್ಯಗಳನ್ನು ಒಂದೇ ವಾಲ್​ನಲ್ಲಿ ನೋಡಬಹುದಾಗಿದೆ.

ABOUT THE AUTHOR

...view details