ಕರ್ನಾಟಕ

karnataka

ETV Bharat / city

ಜಿಂಕೆ ಬೇಟೆ: 6 ಆರೋಪಿಗಳ ಬಂಧನ - Deer hunting

ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ಜಿಂಕೆಗಳನ್ನು ಮಾಂಸಕ್ಕಾಗಿ ಬೇಟೆ ಆಡುತ್ತಿದ್ದ 6 ಜನರನ್ನು ಪೊಲೀಸರು ನಂಜನಗೂಡಿನ ನಾಗಣಾಪುರ ಗ್ರಾಮದಲ್ಲಿ ಬಂಧಿಸಿದ್ದಾರೆ.

6 ಆರೋಪಿಗಳ ಬಂಧನ
6 ಆರೋಪಿಗಳ ಬಂಧನ

By

Published : Jan 8, 2021, 7:11 AM IST

ಮೈಸೂರು: ಮಾಂಸಕ್ಕಾಗಿ ಜಿಂಕೆಯನ್ನು ಬೇಟೆ ಆಡುತ್ತಿದ್ದ 6 ಜನರನ್ನು ಅರಣ್ಯ ಇಲಾಖೆ ಅಧಿಕಾರಿಗಳು ನಂಜನಗೂಡಿನ ನಾಗಣಾಪುರ ಗ್ರಾಮದಲ್ಲಿ ಬಂಧಿಸಿದ್ದಾರೆ.

ನಂಜನಗೂಡಿನ ನಾಗಣಾಪುರ ಗ್ರಾಮದಲ್ಲಿ 6 ಆರೋಪಿಗಳ ಬಂಧನ

ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ಜಿಂಕೆಗಳನ್ನು ಮಾಂಸಕ್ಕಾಗಿ ಬೇಟೆ ಆಡುತ್ತಿದ್ದ ಸೋಮವಾರಪೇಟೆಯ 6 ಮಂದಿ ಬೇಟೆಗಾರರನ್ನು ಅರಣ್ಯ ಇಲಾಖೆಯ ಆರ್.ಎಫ್.ಒ ನಾಗೇಂದ್ರ ನಾಯಕ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ನಂಜನಗೂಡು ತಾಲೂಕಿನ ನಾಗಣಾಪುರ ಗ್ರಾಮದ ಬಸವರಾಜು ಎಂಬುವರ ತೋಟದ ಮನೆಯಲ್ಲಿದ್ದ ಬೇಟೆಗಾರರನ್ನು ಬಂಧಿಸಿದ್ದಾರೆ .

ಇನ್ನು ಬಂಧಿತರಿಂದ ಬೇಟೆಗೆ ಬಳಸಿದ್ದ ಸಲಕರಣೆಗಳು, 3 ಜಿಂಕೆ ಹಾಗೂ ಓಮಿನಿ ಕಾರು ಮತ್ತು ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ABOUT THE AUTHOR

...view details