ಮೈಸೂರು:ಕೊರೊನಾ ಮೂರನೇ ಅಲೆ ಹಿನ್ನೆಲೆಯಲ್ಲಿ, ಒಂದೇ ಕ್ಯಾಂಪಸ್ನಲ್ಲಿ ಮಕ್ಕಳಿಗಾಗಿ 500 ಬೆಡ್ ವ್ಯವಸ್ಥೆ ಮಾಡಲು ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಂಸದ ಹಾಗೂ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷ ಪ್ರತಾಪ್ ಸಿಂಹ ತಿಳಿಸಿದರು.
ಮಾನಸ ಗಂಗೋತ್ರಿಯಲ್ಲಿ ಬಯಲು ರಂಗಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಸ್ಕ್ಯಾನ್ ರೇ ವೈದ್ಯಕೀಯ ಉಪಕರಣ ತಯಾರಿಕೆ ಘಟಕದಲ್ಲಿ ಕಳೆದ ತಿಂಗಳು 29 ಮಂದಿ ಮಕ್ಕಳ ತಜ್ಞ ವೈದ್ಯರೊಂದಿಗೆ ಜಿಲ್ಲೆಯ ಉಸ್ತುವಾರಿ ಸಚಿವರು, ನಗರ ಪಾಲಿಕೆ ಹಿಂದಿನ ಆಯುಕ್ತೆ ಶಿಲ್ಪನಾಗ್ ಹಾಗೂ ಅಧಿಕಾರಿಗಳು ಚರ್ಚೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಆಸ್ಪತ್ರೆ ತೆರೆಯಲು ತೀರ್ಮಾನ ಮಾಡಲಾಗಿದೆ ಎಂದರು.