ಕರ್ನಾಟಕ

karnataka

ETV Bharat / city

ನಿರ್ವಹಣೆ, ವೈದ್ಯರ ಕೊರತೆ: ಮೈಸೂರಿನ ರಾಜಮನೆತನಕ್ಕೆ ಸೇರಿದ 4 ಹೆಣ್ಣಾನೆಗಳು ಗುಜರಾತ್‌ನ ಪುನರ್ವಸತಿ ಕೇಂದ್ರಕ್ಕೆ ರವಾನೆ! - ಮೈಸೂರು ಸುದ್ದಿ

ನಿರ್ವಹಣೆಗೆ ನೌಕರರು ಹಾಗೂ ವೈದ್ಯರು ಸಿಗದ ಕಾರಣ ಮೈಸೂರಿನ ರಾಜಮನೆತನಕ್ಕೆ ಸೇರಿದ 4 ಹೆಣ್ಣಾನೆಗಳನ್ನು ಗುಜರಾತ್‌ನ ಆನೆಗಳ ಪುನರ್ವಸತಿ ಕೇಂದ್ರಕ್ಕೆ ರಾಣಿ ಪ್ರಮೋದಾ ದೇವಿ ಒಡೆಯರ್ ನೀಡಿದ್ದಾರೆ.

4 women elephants from Mysore royal family sent to Gujarat rehabilitation center
ನಿರ್ವಹಣೆ, ವೈದ್ಯರ ಕೊರತೆ; ಮೈಸೂರಿನ ರಾಜಮನೆತನಕ್ಕೆ ಸೇರಿದ 4 ಹೆಣ್ಣಾನೆಗಳು ಗುಜರಾತ್‌ನ ಪುನರ್ವಸತಿ ಕೇಂದ್ರಕ್ಕೆ ರವಾನೆ

By

Published : Sep 18, 2021, 3:26 PM IST

ಮೈಸೂರು: ರಾಜಮನೆತನಕ್ಕೆ ಸೇರಿದ ನಾಲ್ಕು ಹೆಣ್ಣಾನೆಗಳನ್ನು ಗುಜರಾತ್‌ನಲ್ಲಿರುವ ಆನೆಗಳ ಪುನರ್ವಸತಿ ಕೇಂದ್ರಕ್ಕೆ ಮಹಾರಾಣಿ ಪ್ರಮೋದಾ ದೇವಿ ಒಡೆಯರ್ ನೀಡಿದ್ದಾರೆ ಎನ್ನಲಾಗಿದೆ.

ರಾಜಮನೆತನಕ್ಕೆ ಸೇರಿದ 6 ಹೆಣ್ಣಾನೆಗಳಿದ್ದು, ಅವುಗಳನ್ನು ರಾಜಮನೆತನದವರೇ ಸಾಕುತ್ತಿದ್ದರು. ಆದರೆ, ಆನೆಗಳ ನಿರ್ವಹಣೆಗೆ ನೌಕರರು ಹಾಗೂ ವೈದ್ಯರು ಸಿಗದ ಕಾರಣ ಮಹಾರಾಣಿ ಪ್ರಮೋದಾ ದೇವಿ ಒಡೆಯರ್ ಆರು ಹೆಣ್ಣಾನೆಗಳಲ್ಲಿ ಸೀತಾ, ರೂಬಿ, ಜಮಿನಿ ಹಾಗೂ ರಾಜೇಶ್ವರಿ ಎಂಬ ನಾಲ್ಕು ಹೆಣ್ಣಾನೆಗಳನ್ನು ಗುಜರಾತ್‌ನ ಆನೆಗಳ ಪುನರ್ ವಸತಿ ಕೇಂದ್ರಕ್ಕೆ ಕಳುಹಿಸಲು ತೀರ್ಮಾನಿಸಿದ್ದಾರೆ.

ತಮ್ಮ ಪ್ರೀತಿಯ ಎರಡು ಆನೆಗಳಾದ ಚಂಚಲ, ಪ್ರೀತಿ ಎಂಬ ಎರಡು ಆನೆಗಳನ್ನು ಮೈಸೂರು ಅರಮನೆಯಲ್ಲಿ ಉಳಿಸಿಕೊಳ್ಳಲು ತೀರ್ಮಾನಿಸಿದ್ದಾರೆ.


ಅರಮನೆಯೊಳಗೆ ಆನೆ ಸವಾರಿ ಸ್ಥಗಿತ:
ಅರಮನೆಗೆ ಬರುವ ಪ್ರವಾಸಿಗರನ್ನು ಅರಮನೆಯೊಳಗೆ ಆನೆ ರೈಡಿಂಗ್ ಮಾಡಲಾಗುತ್ತಿತ್ತು. ಆಗ ಆನೆಗಳು ಪ್ರತಿದಿನ ಆದಾಯ ತರುತ್ತಿದ್ದವು. ಆದರೆ, ಪ್ರಾಣಿ ದಯಾ ಸಂಘದವರು ಕೋರ್ಟ್‌ನಲ್ಲಿ ಆನೆಗಳನ್ನು ಹಿಂಸಿಸಲಾಗುತ್ತಿದೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಆನೆ ರೈಡಿಂಗ್‌ ರದ್ದುಗೊಳಿಸಲಾಯಿತು.

ಇದರಿಂದ ಆನೆ ನಿರ್ವಹಣೆ ಹಾಗೂ ಆನೆಗಳಿಗೆ ಆರೋಗ್ಯ ಸಮಸ್ಯೆ ಉಂಟಾಗಿದ್ದು, ಇದರಿಂದ ಆನೆಗಳನ್ನು ಗುಜರಾತ್‌ನ ಆನೆ ಪುನರ್ವಸತಿ ಕೇಂದ್ರಕ್ಕೆ ನೀಡಲು ಮಹಾರಾಣಿಯವರು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ABOUT THE AUTHOR

...view details