ಮೈಸೂರು:ಕೆ ಆರ್ ನಗರದ ಚುಂಚನಕಟ್ಟೆಯಲ್ಲಿ ಪ್ರತಿಷ್ಠಾಪನೆಯಾಗಲಿರುವ ಏಕಶಿಲಾ ಹನುಮಂತನ ವಿಗ್ರಹವನ್ನ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವೀಕ್ಷಿಸಿ, ಪೂಜೆ ಸಲ್ಲಿಸಿದ್ದಾರೆ. ನಿನ್ನೆ (ಶುಕ್ರವಾರ) ಹನುಮಂತನ ಮೂರ್ತಿಯನ್ನ ಮೈಸೂರಿನಿಂದ ಕೆ ಆರ್ ನಗರದ ಚುಂಚನ ಕಟ್ಟೆಗೆ ಕ್ರೇನ್ ಮೂಲಕ ತೆರೆದ ಲಾರಿಯಲ್ಲಿ ರವಾನೆ ಮಾಡಲಾಗಿದೆ.
ಚುಂಚನಕಟ್ಟೆಯಲ್ಲಿ ನೆಲೆ ನಿಲ್ಲಲಿದೆ 31 ಅಡಿ ಎತ್ತರದ ಹನುಮಂತನ ಏಕಶಿಲಾ ಮೂರ್ತಿ - ಚುಂಚನಕಟ್ಟೆಯಲ್ಲಿ ನೆಲೆ ನಿಲ್ಲಲಿದೆ 31 ಅಡಿ ಎತ್ತರದ ಹನುಮಂತನ ಏಕಶಿಲಾ ಮೂರ್ತಿ
31 ಅಡಿ ಏಕ ಶಿಲಾ ಹನುಮಂತನ ವಿಗ್ರಹ ಪ್ರತಿಷ್ಠಾಪನೆಗೆ ಸಿದ್ಧವಾಗಿದೆ. ಮೈಸೂರಿನ ಕೆ ಆರ್ ನಗರದ ಚುಂಚನಕಟ್ಟೆಯಲ್ಲಿ ಈ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ.
![ಚುಂಚನಕಟ್ಟೆಯಲ್ಲಿ ನೆಲೆ ನಿಲ್ಲಲಿದೆ 31 ಅಡಿ ಎತ್ತರದ ಹನುಮಂತನ ಏಕಶಿಲಾ ಮೂರ್ತಿ 31 Feet Hieght Monolithic Anjaneya Statue](https://etvbharatimages.akamaized.net/etvbharat/prod-images/768-512-15216419-thumbnail-3x2-news.jpg)
31 ಅಡಿ ಎತ್ತರದ ಹನುಮಂತನ ಏಕಶಿಲಾ ಮೂರ್ತಿ
ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಮೈಸೂರಿನ ಶಿಲ್ಪಿ ಅರುಣ್ ಮತ್ತು ತಂಡದವರಿಂದ ಈ ಮೂರ್ತಿ ಕೆತ್ತನೆ ಮಾಡಲಾಗಿದೆ. ಉತ್ತರಾಖಂಡದ ಕೇದಾರನಾಥದಲ್ಲಿನ ಶಂಕರಾಚಾರ್ಯರ ಮೂರ್ತಿಯನ್ನ ಕೆತ್ತನೆ ಮಾಡಿದ್ದ ಶಿಲ್ಪಿಯೇ ಈ ಆಂಜನೇಯನ ಮೂರ್ತಿಯನ್ನ ಕೆತ್ತನೆ ಮಾಡಿರುವುದು ವಿಶೇಷವಾಗಿದೆ. ಶಾಸಕ ಸಾ.ರಾ ಮಹೇಶ್ ಪ್ರವಾಸೋದ್ಯಮ ಸಚಿವರಾಗಿದ್ದಾಗ ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ಈ ಯೋಜನೆಯನ್ನ ಕೈಗೆತ್ತಿಕೊಳ್ಳಲಾಗಿತ್ತು. ಈ ಮೂರ್ತಿಯನ್ನ ನಿರ್ಮಾಣ ಮಾಡಲು ಸುಮಾರು 40 ಲಕ್ಷ ರೂ. ವೆಚ್ಚ ತಗುಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ;ಮೈಸೂರಿನಲ್ಲಿ ಸಿದ್ಧವಾಗುತ್ತಿದೆ ಪ್ರಧಾನಿ ಒಪ್ಪಿದ ಶಂಕರಾಚಾರ್ಯರ ಪ್ರತಿಮೆ