ಮೈಸೂರು : ಇಂದು 25 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಮೈಸೂರಿನಲ್ಲಿ ಕೊರೊನಾ ಪ್ರಕರಣ 436ಕ್ಕೇರಿದೆ.
ಸಾಂಸ್ಕೃತಿಕ ನಗರಿಯಲ್ಲಿ 25 ಮಂದಿ ಸೋಂಕಿತರು ಪತ್ತೆ - corona virus cases
ಈವರೆಗೆ ಜಿಲ್ಲೆಯಲ್ಲಿ ಒಟ್ಟು 23,266 ಸ್ಯಾಂಪಲ್ ಟೆಸ್ಟ್ ಮಾಡಲಾಗಿದೆ. 22,830 ಮಂದಿಯ ವರದಿ ನೆಗೆಟಿವ್ ಬಂದಿದೆ. ಒಟ್ಟು 436 ಮಂದಿಗೆ ಕೊರೊನಾ ತಗುಲಿದೆ. ಅದರಲ್ಲಿ, 252 ಮಂದಿ ಗುಣಮುಖರಾಗಿದ್ದಾರೆ..
![ಸಾಂಸ್ಕೃತಿಕ ನಗರಿಯಲ್ಲಿ 25 ಮಂದಿ ಸೋಂಕಿತರು ಪತ್ತೆ 25-new-corona-cases-found-in-mysore](https://etvbharatimages.akamaized.net/etvbharat/prod-images/768-512-7906692-thumbnail-3x2-corna.jpg)
ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್
ಸೋಂಕಿತರ ಸಂಪರ್ಕದಿಂದ 12 ಮಂದಿಗೆ, ಅಂತರ್ ರಾಜ್ಯ ಪ್ರಯಾಣ ಬೆಳೆಸಿದ 6 ಮಂದಿಗೆ, ಎಸ್ಎಆರ್ಐ 2 ( ಇಂದು ಒಂದು ಮೃತ), ಐಎಲ್ ಐ 4, ಓರ್ವ ಗರ್ಭಿಣಿ ಸೇರಿದಂತೆ ಒಟ್ಟು 25 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಈವರೆಗೆ ಜಿಲ್ಲೆಯಲ್ಲಿ ಒಟ್ಟು 23,266 ಸ್ಯಾಂಪಲ್ ಟೆಸ್ಟ್ ಮಾಡಲಾಗಿದೆ. 22,830 ಮಂದಿಯ ವರದಿ ನೆಗೆಟಿವ್ ಬಂದಿದೆ. ಒಟ್ಟು 436 ಮಂದಿಗೆ ಕೊರೊನಾ ತಗುಲಿದೆ. ಅದರಲ್ಲಿ, 252 ಮಂದಿ ಗುಣಮುಖರಾಗಿದ್ದಾರೆ. 179 ಸಕ್ರಿಯ ಪ್ರಕರಣಗಳಿವೆ. ಈವರಗೆ 5 ಮಂದಿ ಸಾವನ್ನಪಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.