ಮೈಸೂರು: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ 20 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. 20 ಅಭ್ಯರ್ಥಿಗಳ 33 ನಾಮಪತ್ರಗಳು ಕ್ರಮ ಬದ್ಧವಾಗಿವೆ. ನಾಮಪತ್ರಗಳ ಪರಿಶೀಲನೆ ಕಾರ್ಯ ಮುಗಿದಿದೆ. ದಕ್ಷಿಣ ಪದವೀಧರ ಚುನಾವಣೆ ಅಭ್ಯರ್ಥಿಗಳು ಹಾಗೂ ಅವರ ಏಜೆಂಟರುಗಳ ಸಮ್ಮುಖದಲ್ಲಿ ಪ್ರಾದೇಶಿಕ ಆಯುಕ್ತರಾದ ಡಾ. ಜಿ ಸಿ ಪ್ರಕಾಶ್ ಅವರು ನಾಮಪತ್ರ ಕ್ರಮಬದ್ಧವೆಂದು ತಮ್ಮ ಕಚೇರಿಯಲ್ಲಿ ಘೋಷಿಸಿದ್ದಾರೆ. ನಾಮಪತ್ರಗಳನ್ನು ಹಿಂಪಡೆಯಲು ಮೇ 30 ಕೊನೆಯ ದಿನವಾಗಿದೆ.
ಬಿಜೆಪಿಯ ಮೈ.ವಿ. ರವಿಶಂಕರ್-4, ಕಾಂಗ್ರೆಸ್ನ ಮಧು ಜಿ.ಮಾದೇಗೌಡ-4, ಜೆಡಿಎಸ್ನ ಹೆಚ್ ಕೆ ರಾಮು-4, ರೈತ ಸಂಘದ ಬೆಂಬಲಿತ ಅಭ್ಯರ್ಥಿ ಪ್ರಸನ್ನ ಎನ್ ಗೌಡ-2, ಎಸ್‌ಡಿಪಿಐನ ರಫತ್ಉಲ್ಲಾ ಖಾನ್-2, ದಕ್ಷಿಣ ಪದವೀಧರರ ವೇದಿಕೆ ಅಧ್ಯಕ್ಷ ಎನ್ ಎಸ್ ವಿನಯ್-2, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ವೀರಭದ್ರಸ್ವಾಮಿ-2, ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್- 1 ಸೆಟ್ ನಾಮಪತ್ರ ಸಲ್ಲಿಸಿದ್ದಾರೆ.