ಕರ್ನಾಟಕ

karnataka

ETV Bharat / city

ಕೊರೊನಾ ಬಿಕ್ಕಟ್ಟಿನ ನಡುವೆಯೂ ಪ್ರಾಣಿಗಳ ದತ್ತು ಸ್ವೀಕಾರದಿಂದ 2.90 ಕೋಟಿ ರೂ. ಸಂಗ್ರಹ! - ಪ್ರಾಣಿಗಳ ದತ್ತು ಸ್ವೀಕಾರ

ಕೊರೊನಾ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲೂ ಪ್ರಾಣಿ ದತ್ತು ಸ್ವೀಕಾರದಿಂದ ₹ 2.90 ಕೋಟಿ ಸಂಗ್ರಹವಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ತಿಳಿಸಿದರು.

The zoo's executive director is Ajit Kulkarni
ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ

By

Published : May 30, 2020, 3:45 PM IST

ಮೈಸೂರು:ಕೊರೊನಾ ನಡುವೆಯೂ ಪ್ರಾಣಿಗಳ‌ ದತ್ತು ಸ್ವೀಕಾರದಿಂದ ಮೃಗಾಲಯಕ್ಕೆ ದಾಖಲೆಯ ₹ 2.90 ಕೋಟಿ ಹಣ ಸಂಗ್ರಹವಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಮೃಗಾಲಯಕ್ಕೆ ಕೊರೊನಾ ಸಂದರ್ಭದಲ್ಲಿ ಆರ್ಥಿಕ ನಷ್ಟ ಆಗಿದೆ. ಆದರೆ ಪ್ರಾಣಿಗಳ ಆರೈಕೆಯಲ್ಲಿ ಕೊರತೆಯಾಗಿಲ್ಲ. ನೌಕರರಿಗೆ ಧನಸಹಾಯ ಮಾಡುವಂತೆ ಮೃಗಾಲಯದ ಪ್ರಾಧಿಕಾರದ ಜೊತೆ ಸೇರಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಸಹಾಯ ಸಿಗುವ ಭರವಸೆ ಇದೆ ಎಂದರು.

ಪ್ರಾಣಿಗಳ ದತ್ತು ಸ್ವೀಕಾರದಿಂದ ₹ 2.90 ಕೋಟಿ ಸಂಗ್ರಹ

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಬೆಂಗಳೂರಿನ ತಮ್ಮ ಕ್ಷೇತ್ರದ ದಾನಿಗಳು ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳ ಜೊತೆ ಸೇರಿ ಮೃಗಾಲಯಕ್ಕೆ ₹ 2.63 ಕೋಟಿಯನ್ನು ಪ್ರಾಣಿಗಳ ದತ್ತು ಸ್ವೀಕಾರ ಅಡಿಯಲ್ಲಿ ಕೊಡಿಸಿದ್ದಾರೆ. ಇದು ಮೃಗಾಲಯದ ಇತಿಹಾಸದಲ್ಲೇ ದಾಖಲೆ ಎಂದು ಹರ್ಷ ವ್ಯಕ್ತಪಡಿಸಿದರು.

ಇನ್ಫೋಸಿಸ್ ಫೌಂಡೇಶನ್​​ ಮುಖ್ಯಸ್ಥೆ ಸುಧಾಮೂರ್ತಿ ಅವರು ₹ 20 ಲಕ್ಷ ಕೊಟ್ಟಿದ್ದಾರೆ. ಒಟ್ಟು ₹2.90 ಕೋಟಿ ಸಂಗ್ರಹವಾಗಿದೆ. ಸಂಕಷ್ಟದ ಸಮಯದಲ್ಲೂ ಸ್ಪಂದಿಸಿರುವ ಜನರಿಗೆ ಧನ್ಯವಾದ ಎಂದು ಅಜಿತ್ ಕುಲಕರ್ಣಿ ಹೇಳಿದರು.

ABOUT THE AUTHOR

...view details