ಮೈಸೂರು:ನಗರದ ತಿಲಕ್ ನಗರದಲ್ಲಿರುವ ಶ್ರವಣ ದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆಯಿಂದ ಕಳೆದ 5 ವರ್ಷಗಳಿಂದ 18 ಮಕ್ಕಳು ಕಾಣೆಯಾಗಿದ್ದಾರೆ. ಈ ಪೈಕಿ ಮೂವರು ಸಿಕ್ಕಿದ್ದು ಮತ್ತೆ ಕೆಲವು ಮಕ್ಕಳು ಸಿಕ್ಕಿದ್ದರೂ 2ನೇ ಬಾರಿ ಓಡಿಹೋಗಿದ್ದಾರೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಶಾಲೆಯ ವಾರ್ಡ್ನ್ ಮಂದಣ್ಣ, ಜಿಲ್ಲಾ ಮಕ್ಕಳ ಸಮಿತಿಯವರು (ಸಿಸಿಡ್ಲ್ಯೂ) ಕಿವುಡು ಮಕ್ಕಳನ್ನು ಇಲ್ಲಿಗೆ ತಂದು ಬಿಡುತ್ತಾರೆ. ಇಲ್ಲಿಗೆ ಬರುವ ಈ ಮಕ್ಕಳಿಗೆ ವಿದ್ಯಾಭ್ಯಾಸ ಇರುವುದಿಲ್ಲ. ಅಪ್ಪ, ಅಮ್ಮನ ಹೆಸರನ್ನೂ ಹೇಳಲು ಬರುವುದಿಲ್ಲ. ಕಳೆದ 5 ವರ್ಷಗಳಿಂದ ಇದ್ದಕ್ಕಿದ್ದಂತೆ 18 ಮಕ್ಕಳು ಕಾಣೆಯಾಗಿದ್ದಾರೆ. ಅವರು ಎಲ್ಲಿಗೆ ಹೋಗ್ತಾರೆ, ಏನ್ ಮಾಡ್ತಾರೆ ಅನ್ನೋದನ್ನು ನಮಗೆ ತಿಳಿಯಲು ಸಾಧ್ಯವಾಗುವುದಿಲ್ಲ. ಇದ್ದಕ್ಕಿದ್ದಂತೆ ರೈಲು ಮತ್ತು ಲಾರಿಗಳನ್ನು ಹತ್ತಿ ಎಲ್ಲಿಗೋ ಹೋಗಿ ಬಿಡ್ತಾರೆ. ಓದಲು, ಬರೆಯಲು ಬಾರದ ಕಾರಣ ಅವರಿಗೆ ವಾಪಸ್ ಬರಲು ಗೊತ್ತಾಗುವುದಿಲ್ಲ.