ಕರ್ನಾಟಕ

karnataka

ETV Bharat / city

ಡಿಸಿ ರೋಹಿಣಿ ಸಿಂಧೂರಿ‌ ಆರೋಪಕ್ಕೆ 127 ಪುಟಗಳ ದಾಖಲೆ ಸಮೇತ ಉತ್ತರ ನೀಡಿದ ಮೈಸೂರು ಪಾಲಿಕೆ

ಕೋವಿಡ್ ನಿಯಂತ್ರಣದಲ್ಲಿ ನಗರ ಪಾಲಿಕೆ ಸಂಪೂರ್ಣ ವಿಫಲ ಎಂದು ವರದಿ ನೀಡಿರುವ ಡಿಸಿ ರೋಹಿಣಿ ಸಿಂಧೂರಿ‌ ಆರೋಪಕ್ಕೆ ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳ ಕುರಿತು 127 ಪುಟಗಳ ಸಮಗ್ರ ವರದಿಯನ್ನ ನಗರ ಪಾಲಿಕೆ ಸಲ್ಲಿಸಿದೆ‌.

Shilpa nag
ರೋಹಿಣಿ ಸಿಂಧೂರಿ‌

By

Published : Jun 5, 2021, 10:26 AM IST

ಮೈಸೂರು: ಐಎಎಸ್ ಅಧಿಕಾರಿಗಳ ಕಿತ್ತಾಟ ಮತ್ತೆ ಮುಂದುವರೆದಿದ್ದು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆರೋಪಕ್ಕೆ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಕೈಗೊಂಡ ಕ್ರಮಗಳ ಬಗ್ಗೆ ನಗರ ಪಾಲಿಕೆ ವರದಿ ಸಲ್ಲಿಸಿದೆ.

ಕೋವಿಡ್ ನಿಯಂತ್ರಣದಲ್ಲಿ ನಗರ ಪಾಲಿಕೆ ಸಂಪೂರ್ಣ ವಿಫಲ ಎಂದು ವರದಿ ನೀಡಿರುವ ಡಿಸಿ ರೋಹಿಣಿ ಸಿಂಧೂರಿ‌ ಆರೋಪಕ್ಕೆ ಬೇಸತ್ತು ನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ‌. ಪಾಲಿಕೆ ವಾರ್ಡ್ ಮಟ್ಟದಲ್ಲಿ ಕೈಗೊಂಡ ಕ್ರಮಗಳು, ಟಾಸ್ಕ್ ಫೋರ್ಸ್ ರಚನೆ, ಸಹಾಯವಾಣಿ ರಚನೆ, ಸಂಘ ಸಂಸ್ಥೆಗಳಿಂದ ಪಡೆಯಲಾಗಿರುವ ಸಾಮಗ್ರಿಗಳು ಸೇರಿದಂತೆ ವಿವಿಧ ಕ್ರಮಗಳ ಬಗ್ಗೆ ಸಂಪೂರ್ಣ ವರದಿ ಸಲ್ಲಿಕೆ ಮಾಡಿದೆ.

ನಗರದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳ ಕುರಿತು 127 ಪುಟಗಳ ಸಮಗ್ರ ವರದಿಯನ್ನು ನಗರ ಪಾಲಿಕೆ ಸಲ್ಲಿಸಿದೆ‌.

ಇದನ್ನೂ ಓದಿ:ಮುಖ್ಯಕಾರ್ಯದರ್ಶಿಯವರು ಶಿಲ್ಪನಾಗ್ ವಿಚಾರಣೆ ಮಾಡಿದ್ರೆ 'ಗೋ ಬ್ಯಾಕ್ ಚಳುಚಳಿ' ಮಾಡ್ತೇವೆ: ಪಾಲಿಕೆ ಸದಸ್ಯರು

ABOUT THE AUTHOR

...view details