ಕರ್ನಾಟಕ

karnataka

ETV Bharat / city

ಪ್ರಚೋದನಕಾರಿ ಭಾಷಣ: ಪ್ರಭಾಕರ್​ ಭಟ್ ವಿರುದ್ಧ ಯುವ ಕಾಂಗ್ರೆಸ್ ಅಧ್ಯಕ್ಷ ದೂರು - case filed against kalladka prabhakar Bhat

ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದಾಗಿ ಆರೋಪಿಸಿ ಆರ್​​ಎಸ್​ಎಸ್​​ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಜೋರ ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೋಮು ಪ್ರಚೋದನಕಾರಿಯಾಗಿ ಭಾಷಣ ಮಾಡಿರುವುದಾಗಿ ದೂರಲಾಗಿದೆ.

youth-congress-president-filed-case-against-rss-leader-kalladka-prabhakar-bhat
ದ್ವೇಷಪೂರಿತ ಭಾಷಣ ಆರೋಪ: ಆರೆಸ್ಸೆಸ್ ಮುಖಂಡ ಡಾ.ಭಟ್ ವಿರುದ್ಧ ಯುವ ಕಾಂಗ್ರೆಸ್ ದೂರು

By

Published : Mar 1, 2022, 1:44 PM IST

ಬಂಟ್ವಾಳ: ಆರ್​​ಎಸ್​ಎಸ್​​​ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಜೋರ ಅವರು ದೂರು ದಾಖಲಿಸಿದ್ದಾರೆ.

ಕಳ್ಳಿಗೆ ಗ್ರಾಮದ ದೇವಂದಬೆಟ್ಟು ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಭಾಷಣದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಸುರೇಶ್ ಜೋರ ಅವರು ದೂರಿದ್ದಾರೆ. ಸದ್ಯ ಪ್ರಭಾಕರ್ ಭಟ್ ಕೋಮು ಪ್ರಚೋದನಕಾರಿಯಾಗಿ ಭಾಷಣ ಮಾಡಿರುವ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ.

ಓದಿ :ಮಹಾಶಿವರಾತ್ರಿ: ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ ಬಾಲಿವುಡ್‌ ತಾರೆಯರು!

ABOUT THE AUTHOR

...view details