ಬಂಟ್ವಾಳ (ದ.ಕನ್ನಡ): ಪೂಜೆಗೆಂದು ಹೂವು ಕೊಯ್ಯಲು ಹೋಗಿದ್ದ ವೇಳೆ ಕಾಲು ಜಾರಿ ಕೆರೆಗೆ ಬಿದ್ದು ಯುವತಿ ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಕಾರಾಜೆ ಎಂಬಲ್ಲಿ ನಡೆದಿದೆ. ಇಂದು ಬೆಳಗ್ಗೆ ಈ ಘಟನೆ ನಡೆದಿದೆ.
ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದ ಕಾರಾಜೆ ನಿವಾಸಿ ಲಿಂಗಪ್ಪ ಮೂಲ್ಯ ಎಂಬುವವರ ಪುತ್ರಿ ರಶ್ಮಿತಾ (24) ಸಾವನ್ನಪ್ಪಿದವರು. ಎಂದಿನಂತೆ ದೇವರ ಪೂಜೆಗೆಂದು ಹೂವನ್ನು ಕೊಯ್ಯಲು ಹೋಗಿದ್ದ ವೇಳೆ ಆಯತಪ್ಪಿ ಕೆರೆಗೆ ಬಿದ್ದಿದ್ದಾರೆ.