ಕರ್ನಾಟಕ

karnataka

ETV Bharat / city

ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ವೀಕೆಂಡ್​ ಕರ್ಫ್ಯೂ: ಪ್ರವಾಸಿಗರ ಪರದಾಟ - ಕರ್ನಾಟಕ ಕರ್ಫ್ಯೂ

ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಬಗ್ಗೆ ಜಿಲ್ಲಾಡಳಿತ ಸ್ಪಷ್ಟನೆ ನೀಡಿಲ್ಲ. ಇದರಿಂದ ಜಿಲ್ಲೆಯಲ್ಲಿ ಉಳಿದುಕೊಂಡಿರುವ ಸಾವಿರಾರು ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Weekend curfew
ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ವೀಕೆಂಡ್​ ಕರ್ಫ್ಯೂ

By

Published : Aug 7, 2021, 11:17 AM IST

ಮಂಗಳೂರು/ಕೊಡಗು:ಕೋವಿಡ್ ಪಾಸಿಟಿವಿಟಿ ದರ ಮತ್ತೆ ಏರಿಕೆಯಾಗಿರುವುದರಿಂದ ರಾಜ್ಯ ಸರ್ಕಾರ ಗಡಿ ಜಿಲ್ಲೆಗಳಲ್ಲಿ ವೀಕೆಂಡ್​ ಕರ್ಫ್ಯೂ ಘೋಷಿಸಿದೆ. ಇದರಿಂದಾಗಿ ಪ್ರವಾಸಕ್ಕೆಂದು ಗಡಿ ಜಿಲ್ಲೆಗಳಿಗೆ ತೆರಳಿದ್ದವರು ಪರದಾಟ ನಡೆಸುವಂತಾಗಿದೆ.

ಗಡಿ ಜಿಲ್ಲೆಯಲ್ಲಿ ಬೆಳಿಗ್ಗೆ 5 ಗಂಟೆಯಿಂದ ಮದ್ಯಾಹ್ನ 2 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಕೇಂದ್ರ, ರಾಜ್ಯ ಕಚೇರಿಗಳು, ತುರ್ತು ಅವಶ್ಯಕ ಸೇವೆ ನೀಡುವ ಕೈಗಾರಿಕೆ, ಕಂಪೆನಿ, ಸಂಸ್ಥೆಗಳಿಗೆ ಕಾರ್ಯನಿರ್ವಹಿಸಲು ಅವಕಾಶವಿದೆ. ಇದನ್ನು ಹೊರತುಪಡಿಸಿ ಇತರರ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ತಪಾಸಣೆ ನಡೆಸಿ ಅನಗತ್ಯ ವಾಹನ ಓಡಾಟಕ್ಕೆ‌ ಬ್ರೇಕ್ ಹಾಕುತ್ತಿದ್ದಾರೆ.

ಕೊಡುಗು ಜಿಲ್ಲೆಯಲ್ಲಿ ಬೆಳಗ್ಗೆ 5 ರಿಂದ‌ ಮಧ್ಯಾಹ್ನ 2ರವರೆಗೆ ಕೆಲವು ವಹಿವಾಟಿಗೆ ಅನುಮತಿ ನೀಡಲಾಗಿದೆ. ಹೂವು, ಹಣ್ಣು, ತರಕಾರಿ, ಹಾಲು, ಮದ್ಯದಂಗಡಿ, ದಿನಸಿ ಮಳಿಗೆ ತೆರೆಯಲು ಅವಕಾಶವಿದೆ. ಅನಿವಾರ್ಯ ಕಾರಣಗಳಿಂದ‌ ಓಡಾಡುವವರಿಗೆ ನಿರ್ಬಂಧವಿಲ್ಲ. ಆದರೆ, ಪ್ರವಾಸೋದ್ಯಮದ ಬಗ್ಗೆ ಜಿಲ್ಲಾಡಳಿತ ಸ್ಪಷ್ಟನೆ ನೀಡಿಲ್ಲ. ಇದರಿಂದ ಜಿಲ್ಲೆಯಲ್ಲಿ ಉಳಿದುಕೊಂಡಿರುವ ಸಾವಿರಾರು ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಹೋಂ ಸ್ಟೇ, ಲಾಡ್ಜ್, ರೆಸಾರ್ಟ್ ಬುಕ್ಕಿಂಗ್ ಮಾಡಿರುವ ಪ್ರವಾಸಿಗರು ಹೊಸ ಮಾರ್ಗಸೂಚಿಯಿಂದ ಗೊಂದಲಕ್ಕೀಡಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪೊಲೀಸರು ಅಲ್ಲಲ್ಲಿ ಚೆಕ್ ಪೋಸ್ಟ್ ತೆರೆದಿದ್ದು, ಅನಗತ್ಯ ವಾಹನ ಓಡಾಟ ತಡೆಯುತ್ತಿದ್ದಾರೆ. ತುರ್ತು ಅವಶ್ಯಕ ಸೇವೆಗಳಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಅವರ ಐಡಿ ಕಾರ್ಡ್ ತೋರಿಸಿ ಹೋಗಲು ಬಿಡಲಾಗುತ್ತಿದೆ. ಬಸ್ ವ್ಯವಸ್ಥೆ ಇದ್ದರೂ ಪ್ರಯಾಣಿಕರಿಲ್ಲದೆ, ಬಸ್ ಓಡಾಟ ವಿರಳವಾಗಿದೆ.

ಇದನ್ನೂ ಓದಿ:ಪಾಂಡವಪುರ ಬೇಬಿ ಬೆಟ್ಟದ ನಿಷೇಧಿತ ಪ್ರದೇಶದಲ್ಲಿ ಸ್ಫೋಟಕಗಳು ಪತ್ತೆ

ABOUT THE AUTHOR

...view details