ಬೆಳ್ತಂಗಡಿ(ದಕ್ಷಿಣ ಕನ್ನಡ):ಮದುವೆಯ ವೇಳೆ ಮದು ಮಗಳ ಕೊರಳಿಗೆ ಮದುಮಗ ಹಾರ ಹಾಕುವಾಗ ಕೈತಾಗಿತೆಂದು ಕೋಪಗೊಂಡು ಹಾರವನ್ನು ಕುತ್ತಿಗೆಯಿಂದ ಬಿಸಾಡಿ ವಧು ಮದುವೆ ನಿರಾಕರಿಸಿದ ವಿಚಿತ್ರ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ನಾರಾವಿಯ ಕಲ್ಯಾಣ ಮಂಟಪವೊಂದರಲ್ಲಿ ನಾರಾವಿಯ ವರನಿಗೆ ಮೂಡುಕೊಣಾಜೆಯ ಯುವತಿಯೊಂದಿಗೆ ವಿವಾಹ ನಿಶ್ಚಯವಾಗಿತ್ತು. ಸಂಪ್ರದಾಯದಂತೆ ವಧುವಿಗೆ ವರನು ಹಾರ ಹಾಕುವಾಗ ಅವಳ ಕೈಗೆ ವರನ ಕೈತಾಗಿತೆಂದು ಕೋಪಗೊಂಡ ವಧು ಹಾರವನ್ನು ಕುತ್ತಿಗೆಯಿಂದ ತೆಗೆದು ಬಿಸಾಡಿ ವರನಿಗೆ ಬೈದಿದ್ದಾಳೆ. ಈ ಸಂದರ್ಭದಲ್ಲಿ ಸ್ವಲ್ಪ ಗೊಂದಲ ಉಂಟಾಗಿ ವರನ ಹಾಗೂ ವಧುವಿನ ಕಡೆಯವರ ನಡುವೆ ಗಲಾಟೆ ನಡೆದಿದೆ.