ಮಂಗಳೂರು:ಸಾಲುಮರದ ತಿಮ್ಮಕ್ಕ ಅವರಿಗೆ ಅಕ್ಷರ ಜ್ಞಾನವಿಲ್ಲ. ಯಾವುದೇ ಪದವಿ ಪಡೆದಿಲ್ಲ. ಆದರೆ ತಾನು ಹುಟ್ಟಿರುವ ನೆಲದಲ್ಲಿ ಮುಂದಿನ ಜನಾಂಗಕ್ಕೂ ಪ್ರಕೃತಿ ಉಳಿಯಬೇಕು ಎನ್ನುವ ದೃಷ್ಟಿಯಿಂದ ಸಹಸ್ರ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಕಾಂಕ್ರೀಟ್ ನಾಡಿಗೋಸ್ಕರ ಮರಗಳನ್ನು ಕಡಿಯುತ್ತಿದ್ದೇವೆ: ಸಂಸದ ನಳೀನ್ - undefined
ಸಾಲುಮರದ ತಿಮ್ಮಕ್ಕ ಅವರಿಗೆ ಅಕ್ಷರ ಜ್ಞಾನವಿಲ್ಲ. ಯಾವುದೇ ಪದವಿ ಪಡೆದಿಲ್ಲ. ಆದರೆ ತಾನು ಹುಟ್ಟಿರುವ ನೆಲದಲ್ಲಿ ಮುಂದಿನ ಜನಾಂಗಕ್ಕೂ ಪ್ರಕೃತಿ ಉಳಿಯಬೇಕು ಎನ್ನುವ ದೃಷ್ಟಿಯಿಂದ ಸಹಸ್ರ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಗಿಡಕ್ಕೆ ನೀರು ಹಾಕಿದ ಸಾಲುಮರದ ತಿಮ್ಮಕ್ಕ
ನಗರದ ಯೆಯ್ಯಾಡಿಯ ವಿಕಾಸ್ ಕಾಲೇಜಿನಲ್ಲಿ 'ವೃಕ್ಷ ವಿಕಾಸ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಲುಮರದ ತಿಮ್ಮಕ್ಕ ಅವರು ಗಿಡಗಳ ಹಿಂದೆ ಬದುಕನ್ನು ಸಾಗಿಸಿದ್ದರ ಪರಿಣಾಮವೇ 107 ವರ್ಷವಾದರೂ ಅಷ್ಟೊಂದು ಉತ್ಸಾಹದಿಂದ ಇದ್ದಾರೆ. ಹಾಗಾಗಿ ಸುದೀರ್ಘ ವರ್ಷಗಳ ಕಾಲ ಬದುಕಬೇಕೆಂಬ ಇಚ್ಛೆಯುಳ್ಳವರು ಇವತ್ತಿನಿಂದ ಗಿಡ ನೆಡಬೇಕು ಎಂದರು.
ಕಾರ್ಯಕ್ರಮಕ್ಕೂ ಮೊದಲು ಸಾಲುಮರದ ತಿಮ್ಮಕ್ಕ ಹಾಗೂ ನಾಗಲ್ಯಾಂಡ್ ರಾಜ್ಯಪಾಲ ಪಿ.ಬಿ.ಆಚಾರ್ಯ ಅವರು ಕಾಲೇಜಿನ ಕ್ಯಾಂಪಸ್ನಲ್ಲಿ ಗಿಡ ನೆಟ್ಟರು.