ಮಂಗಳೂರು: ಯಡಿಯೂರಪ್ಪ ಅವರ ಸಂಪುಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಯಾರನ್ನು ಮಂತ್ರಿ ಮಾಡಿದರೂ, ಅದನ್ನು ಒಂದೇ ರೀತಿಯಲ್ಲಿ ಸ್ವೀಕರಿಸಲಾಗುತ್ತೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ನಮ್ಮಲ್ಲಿ ಭೇದ ಭಾವ ಇಲ್ಲ, ಯಾರಿಗೆ ಮಂತ್ರಿಗಿರಿ ಕೊಟ್ಟರೂ ಖುಷಿಯೇ - ಹೀಗಂತಾರೆ ಈ ಶಾಸಕರು! - ಶಾಸಕ ವೇದವ್ಯಾಸ ಕಾಮತ್, ಭರತ್ ಶೆಟ್ಟಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವ ಶಾಸಕರೂ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲ. ಒಂದು ವೇಳೆ ಮುಖ್ಯಮಂತ್ರಿಗಳು ಯಾರನ್ನಾದರೂ ಮಂತ್ರಿ ಮಾಡಿದಲ್ಲಿ, ಒಂದೇ ರೀತಿಯಲ್ಲಿ ನೋಡಲಾಗುತ್ತೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಂಜೀವ ಮಠಂದೂರು ಹೇಳಿದರು.
![ನಮ್ಮಲ್ಲಿ ಭೇದ ಭಾವ ಇಲ್ಲ, ಯಾರಿಗೆ ಮಂತ್ರಿಗಿರಿ ಕೊಟ್ಟರೂ ಖುಷಿಯೇ - ಹೀಗಂತಾರೆ ಈ ಶಾಸಕರು!](https://etvbharatimages.akamaized.net/etvbharat/prod-images/768-512-4058038-thumbnail-3x2-mng.jpg)
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ನೀಡುವುದು ರಾಜ್ಯದ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ದಕ್ಷಿಣ ಕನ್ನಡದಲ್ಲಿ ಯಾರೂ ಕೂಡ ಸಚಿವ ಸ್ಥಾನದ ಆಕಾಂಕ್ಷಿಗಳಿಲ್ಲ. ಕೇಂದ್ರ ವರಿಷ್ಠರು, ಮುಖ್ಯಮಂತ್ರಿ ಗಳು ಯಾರನ್ನು ಉಸ್ತುವಾರಿ ಸಚಿವ ಮಾಡಿದರೂ ಅದನ್ನು ಸಮಾನವಾಗಿ ಸ್ವೀಕರಿಸುತ್ತೇವೆ ಎಂದರು.
ಇನ್ನು, ಕೇಂದ್ರದ ನಾಯಕರು ಜಮ್ಮು ಕಾಶ್ಮೀರ ವಿಚಾರದಲ್ಲಿ ತೊಡಗಿಸಿಕೊಂಡ ಹಿನ್ನೆಲೆಯಲ್ಲಿ, ಕರ್ನಾಟಕದ ಬಗ್ಗೆ ಅವರಿಗೆ ಗಮನಕೊಡಲು ಸಾಧ್ಯವಾಗಿರಲಿಲ್ಲ. ಶೀಘ್ರದಲ್ಲೇ ಸಚಿವ ಸಂಪುಟ ರಚನೆ ಆಗಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಉಪಸ್ಥಿತರಿದ್ದರು.