ಕರ್ನಾಟಕ

karnataka

ETV Bharat / city

''ವಿಶ್ವೇಶ ತೀರ್ಥರಿಗೆ ಪದ್ಮವಿಭೂಷಣ ಪ್ರಶಸ್ತಿ ಸಿಕ್ಕಿದ್ದು ಅವರ ವ್ಯಕ್ತಿತ್ವದಿಂದ''- ವಿಶ್ವಪ್ರಸನ್ನ ತೀರ್ಥರು - ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ

ಪೇಜಾವರ ಶ್ರೀ(pejawar shree )ಗಳಿಗೆ ಮರಣೋತ್ತರವಾಗಿ ನೀಡಿರುವ ಪದ್ಮವಿಭೂಷಣ ಪ್ರಶಸ್ತಿ (padma vibhushan award )ಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ (president Ram Nath Kovind) ಅವರಿಂದ ಸ್ವೀಕರಿಸಿದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ(vishwaprasanna theertha swamiji) ಮಂಗಳೂರಿಗೆ ಬಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

vishwaprasanna theertha swamiji reaction on padma vibhushan award to pejawar shree
ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗೆ ಪದ್ಮವಿಭೂಷಣ - ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಂತಸ

By

Published : Nov 11, 2021, 11:54 AM IST

Updated : Nov 11, 2021, 12:22 PM IST

ಮಂಗಳೂರು: ಕೇಂದ್ರ ಸರ್ಕಾರ ಪೇಜಾವರ ಶ್ರೀ ವಿಶ್ವೇಶ ತೀರ್ಥ(sri vishwesha theertha) ಸ್ವಾಮೀಜಿಯವರಿಗೆ ಅವರ ವ್ಯಕ್ತಿಗತವಾದ ಗುಣ ಗ್ರಹಿಸಿ ಪದ್ಮವಿಭೂಷಣ ಪ್ರಶಸ್ತಿ (padma vibhushan award ) ಯನ್ನು ನೀಡಲಾಗಿದೆ. ಈ ವ್ಯಕ್ತಿಗತವಾದ ಗುಣ ಇನ್ನಾರಿಗೂ ಬರಲು ಸಾಧ್ಯವಿಲ್ಲ. ಹಾಗಾಗಿ ಈ ಪ್ರಶಸ್ತಿ ಶ್ರೀಗಳ ಪ್ರಶಸ್ತಿಯಾಗಿದ್ದು, ಇದು ಅವರ ಮಹತ್ವ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ(vishwaprasanna theertha swamiji) ಹೇಳಿದರು.

ವಿಶ್ವೇಶ ತೀರ್ಥರಿಗೆ ಪದ್ಮವಿಭೂಷಣ-ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯ

ಪೇಜಾವರ ಶ್ರೀಗಳಿಗೆ ಮರಣೋತ್ತರವಾಗಿ ನೀಡಿರುವ ಪದ್ಮವಿಭೂಷಣ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ (president Ram Nath Kovind) ಅವರಿಂದ ಸ್ವೀಕರಿಸಿದ ಅವರು, ಮಂಗಳೂರಿಗೆ ಆಗಮಿಸಿ ಮಾತನಾಡಿದರು. ಬೇರೆ - ಬೇರೆ ಕ್ಷೇತ್ರಗಳ ಸಾಧನೆ, ಸೇವೆ ಗ್ರಹಿಸಿ ಪದ್ಮಪ್ರಶಸ್ತಿಗಳನ್ನು ನೀಡಲಾಗುತ್ತದೆ‌. ಆದರೆ, ಆ ಕ್ಷೇತ್ರಗಳಲ್ಲಿ ಸಾಕಷ್ಟು ಜನರು ಬಂದು ಹೋಗಿರಬಹುದು. ಪ್ರಶಸ್ತಿ ಪಡೆದಿರಬಹುದು. ಮುಂದೆಯೂ ಆ ಕ್ಷೇತ್ರಗಳಲ್ಲಿ ಪ್ರಶಸ್ತಿ ಪಡೆಯುವವರು ಇರಬಹುದು. ಪೇಜಾವರ ಶ್ರೀಗಳ ಆದರ್ಶ ನಮ್ಮ ಕಣ್ಣ ಮುಂದೆ ಇದ್ದು, ಆ ದಾರಿಯಲ್ಲಿ ನಡೆಯುವ ಶಕ್ತಿಯನ್ನು ಗುರುಗಳು ನಮಗೆ ಅನುಗ್ರಹಿಸಬೇಕು ಎಂದು ಹೇಳಿದರು.

ಇದನ್ನೂ ಓದಿ:ಪುನೀತ್ ಸಾವಿನ ಬಳಿಕ ಭಟ್ಕಳದ ಸರ್ಕಾರಿ ಆಸ್ಪತ್ರೆ ಕಡೆ ಮುಖ ಮಾಡಿದ ಯುವ ಜನತೆ

ಪದ್ಮವಿಭೂಷಣ ಪ್ರಶಸ್ತಿಯನ್ನು ರಾಮನಾಥ ಕೋವಿಂದ್ ಅವರು ಕೊಡುವ ವೇಳೆ ವಿಶ್ವೇಶ ತೀರ್ಥ ಸ್ವಾಮೀಜಿ ಇರಬೇಕಿತ್ತು. ಗುರುಗಳು ಇರುವಾಗ ಈ ಪ್ರಶಸ್ತಿ ಅವರಿಗೆ ಸಂದಾಯವಾಗಬೇಕಿತ್ತು ಎಂದು ಹೇಳಿದ್ದರು. ಆದರೆ, ಈ ಸಮಯದಲ್ಲಿ ಅವರು ನಮ್ಮೊಂದಿಗೆ ಇಲ್ಲದಿರುವುದು ದುರ್ವಿಧಿಯಾಗಿದೆ. ಪೇಜಾವರ ಶ್ರೀಗಳ ವ್ಯಕ್ತಿತ್ವ ಈ ಪ್ರಶಸ್ತಿಯಿಂದ ದೊಡ್ಡದಾಗಿರೋದಲ್ಲ. ಗುರುಗಳಿಗೆ ನೀಡುವ ಮೂಲಕ ಈ ಪ್ರಶಸ್ತಿಗೂ ಗೌರವ ಲಭ್ಯವಾಯಿತು ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದರು.

Last Updated : Nov 11, 2021, 12:22 PM IST

ABOUT THE AUTHOR

...view details