ಕರ್ನಾಟಕ

karnataka

ETV Bharat / city

ಮೇಲ್ಸೇತುವೆಗೆ ವೀರಸಾವರ್ಕರ್ ಹೆಸರು, ಮಹಾವೀರರಿಗೆ ಮಾಡಿದ ಅವಮಾನ: ಯು.ಟಿ.ಖಾದರ್ - ಪಂಪ್​ವೆಲ್​ ಮೇಲ್ಸೇತುವೆಗೆ ವೀರ ಸಾವರ್ಕರ್​ ಹೆಸರು

ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಮಹಾವೀರ ಸರ್ಕಲ್ ಎಂದು ಹೆಸರಿಟ್ಟ ಪಂಪ್​ವೆಲ್​ ಮೇಲ್ಸೇತುವೆಗೆ ವೀರ ಸಾವರ್ಕರ್ ಮೇಲ್ಸೇತುವೆ ಎಂದು ಫ್ಲೆಕ್ಸ್​​ ಹಾಕಿರುವುದು ಮಹಾವೀರರಿಗೆ ಮಾಡಿದ ಅಪಮಾನ ಎಂದು ಶಾಸಕ ಯು.ಟಿ.ಖಾದರ್​ ಹೇಳಿದರು.

UT Khader
ಯು.ಟಿ.ಖಾದರ್​

By

Published : Jun 3, 2020, 5:24 PM IST

ಮಂಗಳೂರು: ಪಂಪ್​​​​ವೆಲ್ ಮೇಲ್ಸೇತುವೆಗೆ ವೀರ ಸಾವರ್ಕರ್ ಮೇಲ್ಸೇತುವೆ ಎಂಬ ಹೆಸರಿನ ಫ್ಲೆಕ್ಸ್ ಹಾಕಿರುವುದು ಮಹಾವೀರರಿಗೆ ಮಾಡಿದ ಅವಮಾನ ಎಂದು ಶಾಸಕ ಯು.ಟಿ.ಖಾದರ್ ಬೇಸರ ವ್ಯಕ್ತಪಡಿಸಿದರು.

ಮಂಗಳೂರಿನಲ್ಲಿ ಮಾತನಾಡಿದ ಅವರು, ಪಂಪ್​​​ವೆಲ್​​​ಗೆ​​​ ಹಲವು ವರ್ಷಗಳ ಹಿಂದೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಮಹಾವೀರ ಸರ್ಕಲ್ ಎಂದು ಹೆಸರಿಡಲಾಗಿತ್ತು. ಬಳಿಕ ಬೃಹತ್ ಕಳಸ ನಿರ್ಮಿಸಲಾಗಿತ್ತು. ಇದೀಗ ಬೇರೆ ಹೆಸರಿಡಲು ಹೇಗೆ ಸಾಧ್ಯ ಎಂದರು.

ಈ ಮೂಲಕ ಮಹಾವೀರರಿಗೆ ಅವಮಾನ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಪ್ಲೆಕ್ಸ್ ಮುದ್ರಣ ಮಾಡಿದ ಸಂಸ್ಥೆಯನ್ನೂ ಬಂದ್ ಮಾಡಿಸಬೇಕು. ಈ ಬಗ್ಗೆ ಸಚಿವ, ಸಂಸದ, ಶಾಸಕರು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅವರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ತಿಳಿದುಕೊಳ್ಳಬೇಕಾಗುತ್ತದೆ ಎಂದರು.

ಶಾಸಕ ಯು.ಟಿ.ಖಾದರ್​

ಯಲಹಂಕ ಸೇತುವೆಗೆ ವೀರ ಸಾವರ್ಕರ್ ಹೆಸರಿಡುವ ವಿವಾದದ ಬಗ್ಗೆ ಮಾತನಾಡಿದ ಅವರು, ಆ ಸೇತುವೆಗೆ ಸ್ವಾಮಿ ವಿವೇಕಾನಂದ ಎಂದು ಹೆಸರಿಟ್ಟರೆ ಉತ್ತಮ ಎಂದು ಭಾವಿಸುತ್ತೇನೆ ಎಂದರು.

ABOUT THE AUTHOR

...view details