ಕರ್ನಾಟಕ

karnataka

ETV Bharat / city

ಯಾರ್ಯಾರ ಮಕ್ಕಳಿಗೆ ಹೊಡೆಯಲು ಇವರು ಯಾರು?: ಶಾಸಕ ಖಾದರ್​​ ಕಿಡಿ

ನಾನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ನೈತಿಕ ಪೊಲೀಸ್ ಗಿರಿ, ರೌಡಿಸಂಗೆ ಬ್ರೇಕ್​​ ಹಾಕಲಾಗಿತ್ತು. ಆಗ ಪೊಲೀಸ್ ಕಮಿಷನರ್ ಆಗಿದ್ದ ಸಂದೀಪ್ ಪಾಟೀಲ್ ರೌಡಿಗಳ ಕಾಲಿಗೆ ಗುಂಡು ಹೊಡೆದು ಭಯ ಮೂಡಿಸಲಾಗಿತ್ತು. ಇಂತಹ ಕೆಲಸವನ್ನು ಇಲಾಖೆ ಮಾಡಬೇಕಾಗಿದೆ ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದರು.

mangalore
ಯು.ಟಿ ಖಾದರ್​​ ಪತ್ರಿಕಾಗೋಷ್ಠಿ

By

Published : Sep 30, 2021, 10:45 PM IST

ಮಂಗಳೂರು: ಯಾರ್ಯಾರ ತಂದೆ ತಾಯಿ ಮಕ್ಕಳಿಗೆ ಹೊಡೆಯಲು‌ ಇವರು ಯಾರು ಎಂದು ನೈತಿಕ ಪೊಲೀಸ್ ಗಿರಿ ವಿರುದ್ದ ಮಾಜಿ ಸಚಿವ ಯು.ಟಿ ಖಾದರ್ ಕಿಡಿಕಾರಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ಹಲ್ಲೆ ನಡೆಸಲಾಗುತ್ತಿದೆ. ಯಾರೇ ಆದರೂ ಸರ್ಕಾರ, ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕು.

ನೈತಿಕ ಪೊಲೀಸ್ ಗಿರಿ ವಿರುದ್ದ ಖಾದರ್​​ ಕಿಡಿ

ನಾನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ನೈತಿಕ ಪೊಲೀಸ್ ಗಿರಿ, ರೌಡಿಸಂಗೆ ಬ್ರೇಕ್​​ ಹಾಕಲಾಗಿತ್ತು. ಆಗ ಪೊಲೀಸ್ ಕಮಿಷನರ್ ಆಗಿದ್ದ ಸಂದೀಪ್ ಪಾಟೀಲ್ ರೌಡಿಗಳ ಕಾಲಿಗೆ ಗುಂಡು ಹೊಡೆದು ಭಯ ಮೂಡಿಸಲಾಗಿತ್ತು. ಇಂತಹ ಕೆಲಸವನ್ನು ಇಲಾಖೆ ಮಾಡಬೇಕಾಗಿದೆ ಎಂದರು.

ಇದೇ ಸಂದರ್ಭ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮೈಸೂರಿನಲ್ಲಿ ದೇವಾಲಯ ಧ್ವಂಸ ಮಾಡಿದ್ದು ತಾಲಿಬಾನ್ ಕೃತ್ಯ. ದೇವರ ಹೆಸರಿನಲ್ಲಿ ರಾಜಕೀಯ ಮಾಡಿ ಅಧಿಕಾರಕ್ಕೇರಿದ ಬಿಜೆಪಿ ಇಂತಹ ಕೃತ್ಯ ಮಾಡಿದೆ.

ಕಾಂಗ್ರೆಸ್ ಪಕ್ಷದ ಅಧಿಕಾರವಧಿಯಲ್ಲಿ ದೇವಸ್ಥಾನ ಧ್ವಂಸ ಮಾಡುವಂತಹ ಘಟನೆಗಳು ನಡೆದಿರಲಿಲ್ಲ. ಬಿಜೆಪಿ ಸಾವಿನ ಮನೆಯಲ್ಲಿ ರಾಜಕೀಯ ಮಾಡಿ ಅಧಿಕಾರಕ್ಕೆ ಬಂದವರು. ಕೆಲ ಕೊಲೆ ಘಟನೆಗಳಲ್ಲಿ, ದೇಗುಲಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಬಿಜೆಪಿಯ ಅಂಗ ಸಂಸ್ಥೆಯ ಸಂಘಟನೆಯವರೇ ಜೈಲು ಪಾಲಾಗಿದ್ದಾರೆ ಎಂದರು.

ರಾಜ್ಯದಲ್ಲಿ ತಾಲಿಬಾನ್ ಆಡಳಿತದ ಬಗ್ಗೆ ಚರ್ಚೆ ನಡೆಯುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯನವರು ಕೂಡಾ ಈ ಬಗ್ಗೆ ಮಾತಾಡಿದ್ದಾರೆ. ದುಷ್ಕೃತ್ಯಗಳನ್ನು ಮಾಡಿ ರಾಜಕೀಯ ನಡೆಸುವ ಬಿಜೆಪಿ ಆಡಳಿತದಲ್ಲಿ ತಾಲಿಬಾನ್ ಸಂಸ್ಕೃತಿ ಇದೆ. ಮಂಗಳೂರಲ್ಲಿ ನಡೆದ ನೈತಿಕ ಪೊಲೀಸ್ ಗಿರಿ, ಮೊದಲಾದ ದಾಳಿಗಳೆಲ್ಲ ತಾಲಿಬಾನ್ ಸಂಸ್ಕೃತಿ ಎಂದು ಹೇಳಿದರು.

ABOUT THE AUTHOR

...view details