ಮಂಗಳೂರು:ಕೊರೊನಾ ಸೋಂಕಿನಿಂದ ಗುಣಮುಖನಾದ ವ್ಯಕ್ತಿವೋರ್ವನಿಗೆ ಆಸ್ಪತ್ರೆಯಲ್ಲಿ Respiratory exerciser ಮೂಲಕ ಎಕ್ಸರ್ಸೈಸ್ ಹೇಗೆ ಮಾಡುವುದು ಎಂಬುದನ್ನು ಮಾಜಿ ಸಚಿವ ಯು ಟಿ ಖಾದರ್ ತೋರಿಸಿಕೊಟ್ಟ ವಿಡಿಯೋ ವೈರಲ್ ಆಗಿದೆ.
Viral Video: ಕೋವಿಡ್ನಿಂದ ಗುಣಮುಖನಾದ ವ್ಯಕ್ತಿಗೆ ಆಸ್ಪತ್ರೆಯಲ್ಲಿ Respiratory exercise ಕಲಿಸಿದ ಖಾದರ್ - Respiratory exerciser ಮೂಲಕ ಎಕ್ಸರ್ಸೈಸ್ ಕಲಿಸಿದ ಮಾಜಿ ಸಚಿವ ಯುಟಿ ಖಾದರ್
ಯು ಟಿ ಖಾದರ್ ಕ್ಷೇತ್ರದ ವ್ಯಕ್ತಿಯೊಬ್ಬರು ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಬಳಿಕ ಅವರು ಕೊರೊನಾದಿಂದ ಗುಣಮುಖರಾಗಿದ್ದು ಆಸ್ಪತ್ರೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದರು. ಅವರಿಗೆ ಆಸ್ಪತ್ರೆಯಲ್ಲಿ ನೀಡಲಾದ Respiratory exerciser ಉಪಕರಣ ಬಳಸುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟ ವಿಡಿಯೋ ಸದ್ಯ ಜಾಲತಾಣದಲ್ಲಿ ವೈರಲ್ ಆಗ್ತಿದೆ.

ಯು.ಟಿ. ಖಾದರ್ ಅವರ ಕ್ಷೇತ್ರದ ವ್ಯಕ್ತಿವೋರ್ವರು ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಬಳಿಕ ಅವರು ಕೊರೊನಾದಿಂದ ಗುಣಮುಖರಾಗಿದ್ದು, ಆಸ್ಪತ್ರೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದರು. ಕ್ಷೇತ್ರದ ವ್ಯಕ್ತಿಯನ್ನು ಆಸ್ಪತ್ರೆಗೆ ಹೋಗಿ ಆರೋಗ್ಯ ವಿಚಾರಿಸಿದ ವೇಳೆ ಆತನಿಗೆ ಆಸ್ಪತ್ರೆಯಲ್ಲಿ ನೀಡಲಾದ ಎಕ್ಸರ್ಸೈಸ್ ಉಪಕರಣ ಬಳಸದೆ ಅಲ್ಲಿಯೇ ಇಟ್ಟಿರುವುದು ಕಂಡುಬಂದಿದೆ. ಅದನ್ನು ಗಮನಿಸಿದ ಯು ಟಿ ಖಾದರ್ ಅವರು ಅವರಿಗೆ ಅದನ್ನು ಬಳಸುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟು ರೋಗಿಯಲ್ಲಿ ಅದೇ ರೀತಿ ಮಾಡಲು ತಿಳಿಸಿದ್ದಾರೆ.
ಯು.ಟಿ. ಖಾದರ್ ಅವರು ರೋಗಿಗೆ ಚಿಕಿತ್ಸೆ ಪಡೆಯಲು ನೀಡುತ್ತಿರುವ ಸಲಹೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.