ಕರ್ನಾಟಕ

karnataka

ETV Bharat / city

ಮತಾಂತರ ನಿಷೇಧ ಕಾಯ್ದೆ, ಮದುವೆ ವಯಸ್ಸು ಏರಿಕೆ ಗೊಂದಲಕಾರಿ: ಮಾಜಿ ಸಚಿವ ಯು.ಟಿ. ಖಾದರ್

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮದುವೆ ವಯಸ್ಸು ಹೆಚ್ಚಳ ಹಾಗೂ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದು ಜನರನ್ನು ಗೊಂದಲಕ್ಕೆ ಸಿಲುಕಿಸಿವೆ. ಚುನಾವಣೆಯಲ್ಲಿ ಗೆಲ್ಲಲು ಈ ರೀತಿ ಮಾಡುತ್ತಿವೆ ಎಂದು ಸರ್ಕಾರ ವಿರುದ್ಧ ಮಾಜಿ ಸಚಿವ ಯು.ಟಿ. ಖಾದರ್​ ಗುಡುಗಿದರು.

ut-khadar
ಮಾಜಿ ಸಚಿವ ಯುಟಿ ಖಾದರ್

By

Published : Dec 25, 2021, 12:53 PM IST

ಮಂಗಳೂರು : ರಾಜ್ಯ ಸರ್ಕಾರ ಮಂಡಿಸಿರುವ ಮತಾಂತರ ನಿಷೇಧ ಕಾಯ್ದೆ ಮತ್ತು ಕೇಂದ್ರ ಸರ್ಕಾರ ಮಂಡಿಸಿದ ಮಹಿಳೆಯರ ಮದುವೆ ವಯಸ್ಸನ್ನು 21 ಕ್ಕೇರಿಸಿರುವುದು ಗೊಂದಲಕಾರಿಯಾಗಿದೆ ಎಂದು ಮಾಜಿ ಸಚಿವ ಯು. ಟಿ. ಖಾದರ್ ಹೇಳಿದರು.

ಮತಾಂತರ ನಿಷೇಧ ಕಾಯ್ದೆ, ಮದುವೆ ವಯಸ್ಸು 21 ಏರಿಕೆ ಕುರಿತು ಯುಟಿ ಖಾದರ್​ ಹೇಳಿಕೆ

ನಗರದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ತರಾತುರಿಯಲ್ಲಿ ಮಂಡಿಸಿದ ಮತಾಂತರ ನಿಷೇಧ ಕಾಯ್ದೆ ಗೊಂದಲಕಾರಿಯಾಗಿದೆ. ಬಿಜೆಪಿಯವರಿಗೆ ಈ ಕಾಯ್ದೆಗೆ ತಡೆಯಾಜ್ಞೆ ಸಿಗಲಿದೆ. ಚುನಾವಣಾ ಲಾಭಕ್ಕೋಸ್ಕರ ಜನರಲ್ಲಿ ಗೊಂದಲ ಸೃಷ್ಟಿಸುವುದೇ ಇವರ ಉದ್ದೇಶ ಎಂದರು.

21 ಕಾಯಬೇಕು :ಇನ್ನೂ ಮಹಿಳೆಯರ ಮದುವೆ ವಯಸ್ಸು ಹೆಚ್ಚಿಸಿರುವ ವಿಚಾರದಲ್ಲಿ ಗೊಂದಲವಿದೆ. ಮನೆಯವರು ಸಂಬಂಧ ನೋಡಿ ಮದುವೆ ಮಾಡಲು 21 ವರ್ಷ ಕಾಯಬೇಕು. ಆದರೆ ಲಿವಿಂಗ್ ಟುಗೆದರ್​ಗೆ 18 ವರ್ಷದಲ್ಲಿ ಅವಕಾಶವಿದೆ. ಇದು ಕೂಡ ಗೊಂದಲಕಾರಿ ಎಂದು ಹೇಳಿದರು.

ಬಿಜೆಪಿ ಎಂಇಎಸ್​​ ಪಾರ್ಟನರ್​ : ಬೆಳಗಾವಿ ಗಲಾಟೆ ವಿಚಾರದಲ್ಲಿ ಕನ್ನಡಪರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ನಾವು ಒಂದು ಭಾಷೆಗೆ ಗೌರವ ನೀಡಿ ನಮ್ಮ ಭಾಷೆಯನ್ನು ಬೆಳೆಸಬೇಕು. ನಮ್ಮ ಭಾಷೆ ಕಲಿಯುವ ಜೊತೆಗೆ ಬೇರೆ ಭಾಷೆ ಕಲಿಯಬೇಕು. ಎಂಇಎಸ್ ಬಗ್ಗೆ ಬಿಜೆಪಿಗೆ ಹೆಚ್ಚಾಗಿ ಗೊತ್ತಿದೆ. ಅವರು ಚುನಾವಣೆಯಲ್ಲಿ ಪಾರ್ಟನರ್ ಆಗಿದ್ದವರು. ಬಂದ್​ಗೆ ಬೆಂಬಲಿಸುವ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು ತಿಳಿಸುತ್ತಾರೆ ಎಂದರು.

ABOUT THE AUTHOR

...view details