ಕರ್ನಾಟಕ

karnataka

ETV Bharat / city

ಕರಾವಳಿಯ ಕೊರಗಜ್ಜ ಕೋಲದಲ್ಲಿ ಭಾಗವಹಿಸಿದ ಯು.ಟಿ.ಖಾದರ್ - ದೈವಾರಾಧನೆಗೆ ಮಾಜಿ ಸಚಿವ ಯು.ಟಿ.ಖಾದರ್ ಭೇಟಿ

ಕರಾವಳಿಯಲ್ಲಿ ದೇವರಿಗಿಂತಲೂ ದೈವ, ಭೂತಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಇಲ್ಲಿ ದೈವಾರಾಧನೆಯನ್ನು ಜಾತಿ-ಭೇದ ಮರೆತು ಆರಾಧನೆ ಮಾಡಿಕೊಂಡು ಬರುತ್ತಿರುವುದು ವಿಶೇಷ. ಈ ಬಾರಿಯ ದೈವಾರಾಧನೆಗೆ ಮಾಜಿ ಸಚಿವ ಯು.ಟಿ.ಖಾದರ್ ಆಗಮಿಸಿದ್ದು ವಿಶೇಷವಾಗಿತ್ತು.

UT Khadar participated in the Koragajja kola in manglore
ಕೊರಗಜ್ಜ ಕೋಲದಲ್ಲಿ ಭಾಗವಹಿಸಿದ ಯು.ಟಿ.ಖಾದರ್

By

Published : Feb 9, 2020, 5:25 PM IST

ಮಂಗಳೂರು: ಕರಾವಳಿಯಲ್ಲಿ ದೇವರಿಗಿಂತಲೂ ದೈವ, ಭೂತಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಇಲ್ಲಿ ದೈವಾರಾಧನೆಯನ್ನು ಜಾತಿ-ಭೇದ ಮರೆತು ಆರಾಧನೆ ಮಾಡಿಕೊಂಡು ಬರುತ್ತಿರುವುದು ವಿಶೇಷ. ಈ ಬಾರಿಯ ದೈವಾರಾಧನೆಯಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಭಾಗವಹಿಸಿ ಗಮನ ಸೆಳೆದರು.

ಕೊರಗಜ್ಜ ಕೋಲದಲ್ಲಿ ಭಾಗವಹಿಸಿದ ಯು.ಟಿ.ಖಾದರ್

ನಗರದ ಕೋಟೆಕಾರುವಿನಲ್ಲಿರುವ ಕೊರಗಜ್ಜ ದೈವದ ಸನ್ನಿಧಾನದಲ್ಲಿ ಪ್ರತಿ ವರ್ಷ ಕೋಲವನ್ನು ನಡೆಸಿಕೊಂಡು ಬರುತ್ತಿದ್ದು, ಈ ಬಾರಿಯ ಕೋಲದಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಭಾಗಿಯಾಗಿ ಕೊರಗಜ್ಜ ದೈವದಿಂದ ಪ್ರಸಾದ ಸ್ವೀಕರಿಸಿದರು. ಅಂತರ್​ ಧರ್ಮೀಯರಾದ ಖಾದರ್, ತುಳುವರ ಪ್ರಸಿದ್ಧ ದೈವ ಕೊರಗಜ್ಜನ ಕೋಲದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ, ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

For All Latest Updates

ABOUT THE AUTHOR

...view details