ಮಂಗಳೂರು:ಕರ್ನಾಟಕ ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಧೀನದಲ್ಲಿ ಕೆಲಸ ನಿರ್ವಹಿಸುತ್ತದೆ ಎಂದು ಡಿಕೆ ಕೊರೊನಾ ವಾರಿಯರ್ಸ್ ಎಂಬ ಹೆಸರಿನಲ್ಲಿ ನಕಲಿ ಟ್ವೀಟ್ ಮಾಡಿದವರ ವಿರುದ್ಧ ಮಂಗಳೂರು ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.
ವಾರ್ತಾ ಇಲಾಖೆಯ ಹೆಸರಿನಲ್ಲಿ ಟ್ವಿಟರ್ ಖಾತೆ..ಕ್ರಿಮಿನಲ್ ಪ್ರಕರಣ ದಾಖಲು - Mangalore Police
ವಾರ್ತಾ ಇಲಾಖೆಯ ಹೆಸರಿನಲ್ಲಿ ಅನಧಿಕೃತ ಕೊರೊನಾ ವಾರಿಯರ್ಸ್ ಟ್ವಿಟರ್ ಖಾತೆಯ ಮೇಲೆ ಮಂಗಳೂರು ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.
ವಾರ್ತಾ ಇಲಾಖೆಯ ಹೆಸರಿನಲ್ಲಿ ಅನಧಿಕೃತ ಕೊರೊನಾ ವಾರಿಯರ್ಸ್ ಟ್ವಿಟರ್ ಖಾತೆ..ಕ್ರಿಮಿನಲ್ ಪ್ರಕರಣ ದಾಖಲು
ಡಿಕೆ ಕೊರೊನಾ ವಾರಿಯರ್ಸ್ ಎಂಬ ಹೆಸರಿನಲ್ಲಿ ಈ ಟ್ವಿಟರ್ ಖಾತೆಯಿದ್ದು, ಇದರಲ್ಲಿ ಡಿಐಪಿಆರ್ ಕೋವಿಡ್ 19 ಅಧೀನದಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಹೇಳಿಕೊಳ್ಳಲಾಗಿದೆ.
ಈ ಬಗ್ಗೆ ಟ್ವಿಟರ್ ಖಾತೆಯ ಮೂಲಕ ವಾರ್ತಾ ಇಲಾಖೆಯ ಟ್ವಿಟರ್ ಖಾತೆಯಲ್ಲಿ ಸ್ಪಷ್ಟನೆ ಪಡೆದುಕೊಂಡ ಮಂಗಳೂರು ಪೊಲೀಸ್ ಕಮೀಷನರ್ ಪಿ.ಎಸ್.ಹರ್ಷ ಅವರು ಡಿಕೆ ಕೊರೊನಾ ವಾರಿಯರ್ಸ್ ಟ್ವಿಟರ್ ಖಾತೆಯ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.