ಕರ್ನಾಟಕ

karnataka

ಹಿಜಾಬ್ ಸಂಘರ್ಷದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಶೋಭಾ ಕರಂದ್ಲಾಜೆ

By

Published : Feb 11, 2022, 10:30 PM IST

ಬೆಂಗಳೂರಿನಿಂದ ವಿಮಾನದ ಮೂಲಕ ಮಂಗಳೂರು ನಿಲ್ದಾಣದಲ್ಲಿ ಬಂದಿಳಿದ ಅವರು ಮಾಧ್ಯಮದವರು ಹಿಜಾಬ್ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡದೇ ಮುಂದೆ ಸಾಗಿದರು.

union-minister
ಶೋಭಾ ಕರಂದ್ಲಾಜೆ

ಮಂಗಳೂರು:ತಮ್ಮದೇ ಕ್ಷೇತ್ರದಲ್ಲಿ ಹಿಜಾಬ್, ಕೇಸರಿ ವಿವಾದ ಭುಗಿಲೆದ್ದಿದ್ದರೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಬೆಂಗಳೂರಿನಿಂದ ವಿಮಾನದ ಮೂಲಕ ಮಂಗಳೂರು ನಿಲ್ದಾಣದಲ್ಲಿ ಬಂದಿಳಿದ ಅವರು ಮಾಧ್ಯಮದವರು ಹಿಜಾಬ್ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡದೆ ಮುಂದೆ ಸಾಗಿದರು.

ಉತ್ತರಪ್ರದೇಶದ ಚುನಾವಣೆ ಬಗ್ಗೆ ಮಾತನಾಡಿದ ಶೋಭಾ ಕರಂದ್ಲಾಜೆಯವರು, ಅಲ್ಲಿ ಮೊದಲನೆಯ ಹಂತದ ಚುನಾವಣೆ ನಡೆದಿದೆ. ಬಿಜೆಪಿಗೆ ದೊಡ್ಡ ಪ್ರಮಾಣದ ಬೆಂಬಲ ಕಾಣುತ್ತಿದೆ. ಉತ್ತರ ಪ್ರದೇಶದಲ್ಲಿ ಮೋದಿ ಹಾಗೂ ಯೋಗಿಯವರ ಹೆಸರು ಮೊಳಗುತ್ತಿದೆ. ಅವರ ನಾಮಬಲ, ಅಭಿವೃದ್ಧಿಪರ ಕಾರ್ಯ, ಕಾನೂನು ಸುವ್ಯವಸ್ಥೆ ಸರಿಪಡಿಸಿರುವ ಕೆಲಸ ಜನರ ಮನಸ್ಸನ್ನು ಗೆದ್ದಿದೆ ಎಂದರು.

ನಾನು ಉಸ್ತುವಾರಿ ವಹಿಸಿಕೊಂಡ ವಿಭಾಗದಲ್ಲಿ ಫೆ. 23,27 ಹಾಗೂ ಮಾ.3ರಂದು ಮತದಾನ ನಡೆಯಲಿದೆ. ಅವಧ್ ಕ್ಷೇತ್ರ ಬಿಜೆಪಿಗೆ ಭದ್ರ ನೆಲೆಯನ್ನು ಕೊಟ್ಟಿರುವ ಕ್ಷೇತ್ರ. ಆದ್ದರಿಂದ ಆ ಕ್ಷೇತ್ರದಲ್ಲೂ ಬಿರುಸಿನಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ತಳಹಂತದ ಸಂಘಟನೆಗೆ ಒತ್ತು ನೀಡಿದ್ದು, ಬಹಳ ದೊಡ್ಡ ಅಂತರದಲ್ಲಿ ಯೋಗಿ ಸರಕಾರ ಮತ್ತೆ ಅಧಿಕಾರಕ್ಕೆ ಬರುವ ನಮಗೆ ವಿಶ್ವಾಸವಿದೆ. ಎಂದರು.

ಓದಿ:ಮಹಾರಾಷ್ಟ್ರದಿಂದ ಬರುವವರಿಗೆ ಆರ್​​ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯವಲ್ಲ.. ಆದರೆ ಇವೆಲ್ಲ ಬೇಕೇಬೇಕು!

For All Latest Updates

TAGGED:

ABOUT THE AUTHOR

...view details