ಕರ್ನಾಟಕ

karnataka

ETV Bharat / city

ದಕ್ಷಿಣ ಕನ್ನಡದಲ್ಲಿ ಮಳೆ ಆರ್ಭಟ.. ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕಟ್ಟಡ ಕುಸಿತ - ಶಾಲಾ ಕಟ್ಟಡ ಕುಸಿತ

ಸೋಮವಾರ ರಾತ್ರಿ ಸುರಿದ ಮಳೆಗೆ ಉಳ್ಳಾಲದ ಕಿನ್ಯಾ ಬೆಳರಿಂಗೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಳೇ ಕಟ್ಟಡ‌ ಕುಸಿದುಬಿದ್ದಿದೆ. ಘಟನೆ ರಾತ್ರಿ ಸಂಭವಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.

ರಾತ್ರಿ ಸುರಿದ ಮಳೆಗೆ ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕಟ್ಟಡ ಕುಸಿತ
ರಾತ್ರಿ ಸುರಿದ ಮಳೆಗೆ ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕಟ್ಟಡ ಕುಸಿತ

By

Published : May 17, 2022, 7:20 PM IST

ಉಳ್ಳಾಲ(ದಕ್ಷಿಣ ಕನ್ನಡ): ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಶಿಥಿಲಾವಸ್ಥೆಯಲ್ಲಿದ್ದ ಶಾಲೆಯ ಕಟ್ಟಡ ಕುಸಿದು ಬಿದ್ದಿರುವ ಘಟನೆ ಕಿನ್ಯಾ ಬೆಳರಿಂಗೆಯಲ್ಲಿ ನಡೆದಿದೆ. ಕಿನ್ಯಾ ಬೆಳರಿಂಗೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಳೇ ಕಟ್ಟಡ‌ ಕುಸಿದುಬಿದ್ದಿದೆ.

ಸಮೀಪದಲ್ಲೇ ಹೊಸತಾದ ಕಟ್ಟಡ ನಿರ್ಮಿಸಲಾಗಿದ್ದು, ಅದರಲ್ಲಿ ತರಗತಿಗಳು ನಡೆಯುತ್ತಿದ್ದುದರಿಂದ ತರಗತಿ ನಡೆಸಲು ಅಡಚಣೆಯಾಗಿಲ್ಲ. ಆದರೆ ರಾತ್ರಿ ವೇಳೆ ಕಟ್ಟಡ ಕುಸಿದುಬಿದ್ದಿರುವುದರಿಂದ ಸಂಭಾವ್ಯ ಅನಾಹುತ ತಪ್ಪಿದೆ.

ಹಳೇ ಕಟ್ಟಡ ಕೆಡವಲು ಗ್ರಾಮ ಪಂಚಾಯತ್​ನಿಂದ ಶಿಕ್ಷಣ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಅನುಮತಿ ನೀಡದ ಹಿನ್ನೆಲೆಯಲ್ಲಿ ಕೆಡವಲು ಸಾಧ್ಯವಾಗಿಲ್ಲ ಎಂದು ಗ್ರಾಮ ಪಂಚಾಯತ್​ ಸದಸ್ಯ ಸಿರಾಜ್ ಕಿನ್ಯಾ ತಿಳಿಸಿದ್ದಾರೆ.

ಇದನ್ನೂ ಓದಿ:ಬಾಲಿವುಡ್​​ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾದ 'ಗಬ್ಬರ್ ಸಿಂಗ್'​​.. ಬಿಗ್​ ಬಜೆಟ್​​​ ಚಿತ್ರಕ್ಕಾಗಿ ಧವನ್ ತಯಾರಿ

ABOUT THE AUTHOR

...view details