ಕರ್ನಾಟಕ

karnataka

ETV Bharat / city

'ಉಜಿರೆಯ ಪುಸ್ತಕ ಗೂಡು': ಕೈ ಹಾಕಿ ಪುಸ್ತಕ ತೆರೆದು ಓದಬೇಕೆನ್ನುವ ವಿನ್ಯಾಸ - ಉಜಿರೆಯ ಪುಸ್ತಕ ಗೂಡು ಗ್ರಂಥಾಲಯ

ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಪಂಚಾಯತ್​​ನ 'ಪುಸ್ತಕಗೂಡು' ಎಲ್ಲರನ್ನೂ ಆಕರ್ಷಿಸುತ್ತಿದೆ. ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಪ್ರಕಾಶ್ ಶೆಟ್ಟಿಯವರು‌ ಈ ಗೂಡುಗಳನ್ನು ವಿನ್ಯಾಸಗೊಳಿಸಿದ್ದಾರೆ.

Ujire PDO designed book nests name library
ಉಜಿರೆಯಲ್ಲಿ ಪುಸ್ತಕ ಗೂಡು ಗ್ರಂಥಾಲಯ

By

Published : Dec 31, 2021, 4:01 PM IST

Updated : Dec 31, 2021, 4:27 PM IST

ಬೆಳ್ತಂಗಡಿ:ಎಲ್ಲವನ್ನೂ ಮೊಬೈಲ್ ಮೂಲಕವೇ ನಿರ್ವಹಿಸುವಂತಹ ಈ ಕಾಲಘಟ್ಟದಲ್ಲಿ ಪುಸ್ತಕ ಓದುವವರು, ಗ್ರಂಥಾಲಯಕ್ಕೆ ಹೋಗುವವರ ಸಂಖ್ಯೆ ದಿನದಿಂದ ದಿನ ಕಡಿಮೆಯಾಗತೊಡಗಿದೆ. ಇದಕ್ಕಾಗಿ ಸರ್ಕಾರ ಗ್ರಾಮೀಣ ಭಾಗಗಳಲ್ಲಿ ಜನರ ಪುಸ್ತಕ ಓದುವ ಹವ್ಯಾಸವನ್ನು ಹೆಚ್ಚಿಸಬೇಕು ಎಂಬ ನಿಟ್ಟಿನಲ್ಲಿ ಡಿಜಿಟಲ್ ಹಾಗೂ ಸುಸಜ್ಜಿತವಾದ ಗ್ರಂಥಾಲಯ ರಚಿಸುವ ಬಗ್ಗೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ದ.ಕ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ವ್ಯವಸ್ಥಿತ ರೀತಿಯಲ್ಲಿ ಗ್ರಂಥಾಲಯ ತೆರೆದು ಸಾರ್ವಜನಿಕರಿಗೆ ಸುಲಭ ರೀತಿಯಲ್ಲಿ ಪುಸ್ತಕ ಓದಲು ವ್ಯವಸ್ಥೆ ಕಲ್ಪಿಸಿ, ಅವರ ಜ್ಞಾನ ಭಂಡಾರನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪಂಚಾಯತ್​​ಗಳು ಈಗಾಗಲೇ ಸಿದ್ಧತೆ ಮಾಡಿಕೊಂಡಿವೆ.‌

ಇದಕ್ಕೆ ಪೂರಕವಾಗಿ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಪಂಚಾಯತ್​​ನ 'ಪುಸ್ತಕಗೂಡು' ಎಲ್ಲರನ್ನೂ ಆಕರ್ಷಿಸುತ್ತಿದೆ. ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಪ್ರಕಾಶ್ ಶೆಟ್ಟಿ ಈ ಗೂಡುಗಳನ್ನು ವಿನ್ಯಾಸಗೊಳಿಸಿದ್ದಾರೆ. ಜನರು ಆಕರ್ಷಿತರಾಗಿ ಇಲ್ಲಿಗೆ ಭೇಟಿ ನೀಡಿ, ಒಮ್ಮೆ ಈ ಗೂಡಿಗೆ ಕೈ ಹಾಕಿ ಪುಸ್ತಕವನ್ನು ತಿರುವಿ ನೋಡಲೇಬೇಕು ಎಂಬ ವಿನ್ಯಾಸಗೊಳಿಸಿದ್ದಾರೆ.

ವಿಭಿನ್ನ ರೀತಿಯಲ್ಲಿ ಮೂಡಿಬಂದಿರುವ ಈ ಪುಸ್ತಕ ಗೂಡನ್ನು ಹಕ್ಕಿಗಳ ಗೂಡಿನ ಚಿತ್ರ ಹಾಗೂ ಇನ್ನಿತರ ಗೋಡೆ ಬರಹಗಳನ್ನು ಬರೆಯಿಸಿ ಎಲ್ಲರೂ ಒಮ್ಮೆ ಕುತೂಹಲಭರಿತರಾಗಿ ನೋಡಲು ಆಕರ್ಷಣೀಯವಾಗಿ ಕಾಣುವಂತೆ ಮಾಡಿದ್ದಾರೆ. ಈಗಾಗಲೇ ಇವರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕವನ್ನು ಮಾದರಿಯಾಗಿ ನಿರ್ಮಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಗ್ರಾಮೀಣ ಪ್ರದೇಶದ ಎಲ್ಲ ಗ್ರಾಮ ಪಂಚಾಯಿತಿಯಲ್ಲಿ ಈಗಾಗಲೇ ಸಾರ್ವಜನಿಕ ಗ್ರಂಥಾಲಯಗಳಿವೆ. ಸರ್ಕಾರ ಈಗಾಗಲೇ ಉನ್ನತಿಕರಿಸಿ ಅದನ್ನು ಮಾಹಿತಿ ಕೇಂದ್ರವನ್ನಾಗಿಸಿ ಮಾರ್ಪಡಿಸಿದೆ. ದ.ಕ ಜಿಲ್ಲೆಗೆ ಸಂಬಂಧಪಟ್ಟಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕುಮಾರ್ ಅವರ ಆಶಯದಂತೆ ಗ್ರಾಮ ಪಂಚಾಯತ್​​ಗಳ ಜತೆಗೆ ಪುಸ್ತಕ ಗೂಡುಗಳನ್ನು ನಿರ್ಮಿಸಿ, ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ಕೂಡ ಪುಸ್ತಕದ ಜ್ಞಾನ ಹೆಚ್ಚಿಸುವುದಕ್ಕಾಗಿ ಜತೆಗೆ ಗ್ರಾಮೀಣ ಪ್ರದೇಶದ ಜನರು ತಮ್ಮ ಬಿಡುವಿನ ಸಮಯದಲ್ಲಿ ಈ ಪುಸ್ತಕ ಗೂಡಿನಲ್ಲಿರುವ ವಿವಿಧ ಪುಸ್ತಕವನ್ನು ಓದುವಂತಹ ವ್ಯವಸ್ಥೆ ಮಾಡಿ ಅವರ ಓದುವ ಹವ್ಯಾಸವನ್ನು ಹೆಚ್ಚಿಸುವ ಕಾರ್ಯಕ್ರಮ‌ ಇದಾಗಿದೆ.

ಉಜಿರೆಯಲ್ಲಿ ನಿರ್ಮಾಣವಾದ ಪುಸ್ತಕ ಗೂಡು ಗ್ರಂಥಾಲಯ

ಈಗಾಗಲೇ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್​​ಗಳಲ್ಲಿ ಪುಸ್ತಕ ಗೂಡು ನಿರ್ಮಾಣವಾಗುತ್ತಿದೆ. ಅದರಂತೆ ಉಜಿರೆ ಗ್ರಾ.ಪಂ ನ ಪೇಟೆಯಲ್ಲಿರುವ ಕ.ರಾ.ರ ಸಾ. ಸಂಸ್ಥೆಯ ಹಾಗೂ ಬೆಳಾಲು ರಸ್ತೆಯ ಚಾಮುಂಡಿ ನಗರ ಓಡಲ ಎಂಬಲ್ಲಿರುವ ಬಸ್​​ ತಂಗುದಾಣದ ಕಟ್ಟಡದಲ್ಲಿ ಪುಸ್ತಕ ಗೂಡು ರಚಿಸಲಾಗಿದೆ.

ಈ ಪುಸ್ತಕ ಗೂಡಿಗೆ ಸಾರ್ವಜನಿಕರು ಭೇಟಿ ನೀಡಿ ಪುಸ್ತಕ ಓದುವಂತೆ ಮಾಡುವ ನಿಟ್ಟಿನಲ್ಲಿ ಆಕರ್ಷಣೀಯ ರೀತಿಯ ಗೋಡೆ ಬರಹಗಳೊಂದಿಗೆ ವಿವಿಧ ಚಿತ್ರಗಳನ್ನು ಬಿಡಿಸಿ ಸುಂದರವಾಗಿ ತಯಾರಿ ಮಾಡಿದ್ದೇವೆ. ಈಗಾಗಲೇ ಎಲ್ಲಾ ಕೆಲಸ ಪೂರ್ಣಗೊಂಡಿದೆ.‌ ಇದರ ಸಂಪೂರ್ಣ ನಿರ್ವಹಣೆಯನ್ನು ಪಂಚಾಯತ್ ಮೂಲಕ ಸಾರ್ವಜನಿಕರು ನಿರ್ವಹಿಸಲಿದ್ದಾರೆ ಎಂದು ಪಿಡಿಒ ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.

ಇದನ್ನೂ ಓದಿ:ಕೊಪ್ಪಳದ 'ಡೆತ್​ಸ್ಪಾಟ್​' ಸಣಾಪುರ ಕೆರೆಯಲ್ಲಿ ಅಸುರಕ್ಷಿತ ದೋಣಿ ವಿಹಾರ

Last Updated : Dec 31, 2021, 4:27 PM IST

ABOUT THE AUTHOR

...view details