ಕರ್ನಾಟಕ

karnataka

ETV Bharat / city

ಸಾಧನೆಗೆ ವಯಸ್ಸಿನ ಅಡ್ಡಿ ಇಲ್ಲ: 75ರ ಹರೆಯದಲ್ಲಿ ಪಿಎಚ್​ಡಿ ಪಡೆದ ಉಡುಪಿಯ ಮಹಿಳೆ - Udupi woman receiving her Ph.D. at 75

'ಕ್ರಿಟಿಕಲ್​ ಅನಾಲಿಸಿಸ್​ ಆಫ್​ ಶ್ರೀ ಮಧ್ವಾಚಾರ್ಯಾಸ್​ ಯುನೀಕ್​ ಡಾಕ್ಟ್ರಿನ್ಸ್​ ಆಫ್​ ಜೀವಸ್ವಭಾವ ವಾದ ಆ್ಯಂಡ್​ ಸರ್ವಶಬ್ದ ವಚ್ಯತ್ವ ಆಫ್​ ವಿಷ್ಣು' ಎಂಬ ಪ್ರಬಂಧಕ್ಕೆ ಪಿಎಚ್​ಡಿ ಪದವಿ ದೊರೆತಿದೆ.

udupi woman receiving her phd at 75 from mangalore university
75ನೇ ವರ್ಷದಲ್ಲಿ ಮಂಗಳೂರು ವಿವಿಯಿಂದ ಪಿಎಚ್​ಡಿ ಪಡೆದ ಉಡುಪಿ ಮಹಿಳೆ

By

Published : Apr 23, 2022, 6:12 PM IST

ಮಂಗಳೂರು: ಶಿಕ್ಷಣ ಕಲಿಯಬೇಕೆಂಬ ಇಚ್ಛೆಯಿದ್ದರೆ ಅದಕ್ಕೆ ವಯಸ್ಸು ಅಡ್ಡಿಯಾಗುವುದಿಲ್ಲ. ಇದಕ್ಕೆ ಅಪರೂಪದ ನಿದರ್ಶನ ಉಡುಪಿಯ ಹಿರಿಯ ಮಹಿಳೆ. ತನ್ನ ಮೊಮ್ಮಕ್ಕಳೊಂದಿಗೆ ಹಾಯಾಗಿರಬೇಕಾದ 75 ವರ್ಷದಲ್ಲೂ ಇವರು ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್​ಡಿ ಪದವಿ ‌ಪಡೆದುಕೊಂಡಿದ್ದಾರೆ.

ಉಡುಪಿ ಜಿಲ್ಲೆಯ ಉಷಾ ಚಡಗ ಈ ಸಾಧನೆ ಮಾಡಿದವರು. ಇವರಿಗೆ ಇಬ್ಬರು ಮೊಮ್ಮಕ್ಕಳಿದ್ದಾರೆ. ಇದೀಗ 'ಕ್ರಿಟಿಕಲ್​ ಅನಾಲಿಸಿಸ್​ ಆಫ್​ ಶ್ರೀ ಮಧ್ವಾಚಾರ್ಯಾಸ್​ ಯುನೀಕ್​ ಡಾಕ್ಟ್ರಿನ್ಸ್​ ಆಫ್​ ಜೀವಸ್ವಭಾವ ವಾದ ಆ್ಯಂಡ್​ ಸರ್ವಶಬ್ದ ವಚ್ಯತ್ವ ಆಫ್​ ವಿಷ್ಣು' ಎಂಬ ಪ್ರಬಂಧಕ್ಕೆ ಮಂಗಳೂರು ವಿವಿ ಪಿಎಚ್​ಡಿ ಪದವಿ ನೀಡಿದೆ.


ಉಷಾ ಚಡಗ ಅವರು ತಿರುವನಂತಪುರಂನ ಸಂತನ ಪಬ್ಲಿಕ್ ಸ್ಕೂಲ್​ನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ನಿವೃತ್ತಿ ಬಳಿಕ ಉಡುಪಿಗೆ ಬಂದಿದ್ದು ಎಸ್ಎಂಎಸ್​ಪಿ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತಾಧ್ಯಯನ ಮಾಡಿದ್ದಾರೆ. ಸಂಸ್ಕೃತ ವಿದ್ವತ್ ಕಲಿತ ಬಳಿಕ ಪಿಎಚ್​ಡಿ ಮಾಡಲು ನಿರ್ಧರಿಸಿ 5 ವರ್ಷಗಳಲ್ಲಿ ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ:ಅಪ್ಪನ ಸಾಧನೆಗೆ ಪುತ್ರನೇ ಸಾಕ್ಷಿ.. ತಂದೆಯ ಪಿಹೆಚ್​ಡಿ ಪದವಿ ಸ್ವೀಕರಿಸಿದ 14ರ ಮಗ..

ABOUT THE AUTHOR

...view details