ಕರ್ನಾಟಕ

karnataka

ETV Bharat / city

ಪಾಕಿಸ್ತಾನ, ಆಫ್ಘಾನಿಸ್ತಾನಕ್ಕೆ ಹೋಗಿ ಬರಲಿ, ಇಲ್ಲಿನ ಸ್ವಾತಂತ್ರ್ಯ ಬಗ್ಗೆ ಗೊತ್ತಾಗುತ್ತದೆ : ಯು ಟಿ ಖಾದರ್ - ವಿದೇಶಕ್ಕೆ ಹೋಗಿ ಬರಲಿ ನಮ್ಮ ದೇಶದ ಸ್ವಾತಂತ್ರ್ಯದ ಬಗ್ಗೆ ತಿಳಿಯುತ್ತದೆ

ವಿಧಾನಸಭೆಯ ವಿಪಕ್ಷ ಉಪನಾಯಕ ಯು ಟಿ ಖಾದರ್ ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜಿನ ಹಿಜಾಬ್ ವಿವಾದದ ಬಗ್ಗೆ ಮಾತನಾಡಿ, ವಿದ್ಯಾರ್ಥಿನಿಯರು ಪಾಕಿಸ್ತಾನ, ಆಫ್ಘಾನಿಸ್ತಾನಕ್ಕೆ ಹೋಗಿ ಬಂದರೆ ನಮ್ಮ ದೇಶದಲ್ಲಿ ಇರುವ ಸ್ವಾತಂತ್ರ್ಯದ ಬಗ್ಗೆ ಅರಿವಾಗುತ್ತದೆ ಎಂದು ಹೇಳಿದ್ದಾರೆ..

U T Khader
ಯು ಟಿ ಖಾದರ್

By

Published : Jun 6, 2022, 4:33 PM IST

ಮಂಗಳೂರು :ವಿಶ್ವವಿದ್ಯಾನಿಲಯದ ಕಾಲೇಜಿನಲ್ಲಿ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ. ಖಾದರ್​, ಇವರೆಲ್ಲ ಒಮ್ಮೆ ಪಾಕಿಸ್ತಾನ, ಆಫ್ಘಾನಿಸ್ತಾನ ಸೇರಿದಂತೆ ವಿದೇಶಕ್ಕೆ ಹೋಗಿ ಬರಲಿ. ಆಗ ನಮ್ಮ ದೇಶ ನೀಡಿರುವ ಸ್ವಾತಂತ್ರ್ಯದ ಅರಿವಾಗುತ್ತದೆ ಎಂದು ತಿಳಿಸಿದ್ದಾರೆ.

ನಮ್ಮ ದೇಶದ ಸೌಂದರ್ಯ ಮತ್ತು ಅವಕಾಶಗಳು ಇವರು ವಿದೇಶಕ್ಕೆ ಹೋದಾಗ ಗೊತ್ತಾಗುತ್ತದೆ. ಇಲ್ಲಿ ಮಾತಾಡಬಹುದು, ಜಿಲ್ಲಾಧಿಕಾರಿಗಳ ಜೊತೆಗೆ ಮೀಟಿಂಗ್ ಮಾಡಬಹುದು, ಪ್ರೆಸ್‌ಮೀಟ್ ಮಾಡಬಹುದು. ಇಲ್ಲಿ ಬೌನ್ಸರ್, ಬಾಡಿ ಗಾರ್ಡ್ ಮೊದಲೆಲ್ಲ ಹೊಂದಿರುವವರು ಅಲ್ಲಿಗೆ ಹೋದಾಗ ಬೆಕ್ಕಿನಂತೆ ಇರ್ತಾರೆ. ಅವರು ಅಲ್ಲಿಗೆ ಹೋಗಿ ನೋಡಿ ಬಂದಾಗ ನಮ್ಮ ದೇಶದ ಮಹತ್ವ ಗೊತ್ತಾಗುತ್ತದೆ ಎಂದರು.

ಪಾಕಿಸ್ತಾನ, ಆಫ್ಘಾನಿಸ್ತಾನಕ್ಕೆ ಹೋಗಿ ಬರಲಿ, ಇಲ್ಲಿನ ಸ್ವಾತಂತ್ರ್ಯದ ಬಗ್ಗೆ ಗೊತ್ತಾಗುತ್ತದೆ ಎಂದಿರುವ ಮಾಜಿ ಸಚಿವ ಯು ಟಿ ಖಾದರ್‌..

ಶಿಕ್ಷಣದ ಎದುರು ಆ ಧರ್ಮ, ಈ ಧರ್ಮ ಆ ಸಮುದಾಯ ಎನ್ನುವುದು ಇರುವುದಿಲ್ಲ. ಶಿಕ್ಷಣದ ಮೂಲಕ ಭವಿಷ್ಯ, ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಮಕ್ಕಳು ದಾರಿ ತಪ್ಪದಂತೆ ಹೆತ್ತವರು ಜಾಗ್ರತೆ ವಹಿಸಬೇಕು. ಹಿಜಾಬ್ ಬಗ್ಗೆ ಪಟ್ಟು ಹಿಡಿದಿರುವ ವಿದ್ಯಾರ್ಥಿನಿಯರ ಬಗ್ಗೆ ಅವರನ್ನು ಬೆಳೆಸಿದ, ಶಿಕ್ಷಣ, ಬಟ್ಟೆ-ಬರೆ ನೀಡಿದ ಹೆತ್ತವರು ಗಮನಿಸಬೇಕು ಎಂದರು.

ಇದನ್ನೂ ಓದಿ:ಸಂಘದ ಬಗ್ಗೆ ಮಾತನಾಡಿದರೆ ಕಾಂಗ್ರೆಸ್​ ಸುಟ್ಟು ಹೋಗುತ್ತೆ: ನಳಿನ್​ಕುಮಾರ್​ ಕಟೀಲ್​

ABOUT THE AUTHOR

...view details