ಮಂಗಳೂರು:ಬಬ್ಬುಕಟ್ಟೆ ಚಂದಪ್ಪ ಎಸ್ಟೇಟ್ನಿಂದ ಕಳವು ನಡೆಸಿದ ಆರೋಪದಲ್ಲಿ ಇಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರಿಗಾಗಿ ಶೋಧ ಮುಂದುವರಿದಿದೆ.
ಮದನಿನಗರ ನಿವಾಸಿ ನಿಝಾಂ, ಮಾಸ್ತಿಕಟ್ಟೆಯ ಆಶಿ ಯಾನೆ ಆಸೀಫ್ ಬಂಧಿತರಾಗಿದ್ದಾರೆ. ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳಿಗೆ ಶೋಧ ಮುಂದುವರಿದಿದೆ.
ಪ್ರಕರಣದ ಹಿನ್ನೆಲೆ: ಅಕ್ಟೋಬರ್ 7ರಂದು ವಿದೇಶದಲ್ಲಿ ವಾಸವಿರುವ ಸುಜಾತಾ ಎಂಬುವರ ಮನೆಯಲ್ಲಿ ಕಳವು ನಡೆದಿದೆ. ಬೆಲೆ ಬಾಳುವ ಮೂರು ಕಂಚಿನ ದೀಪಗಳನ್ನು ಕಳವು ನಡೆಸಲಾಗಿತ್ತು. ಮನೆಯಲ್ಲಿ ಯಾರೂ ಇಲ್ಲದಿರುವ ಬಗ್ಗೆ ತಿಳಿದು ಕಳ್ಳರು ಕೃತ್ಯ ಎಸಗಿದ್ದರು.
ಹಿಂಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಸೊತ್ತುಗಳಿಗಾಗಿ ಹುಡುಕಾಡಿ ಬಳಿಕ ಏನೂ ಸಿಗದಿದ್ದಾಗ ಮೂರು ಬೃಹತ್ ಗಾತ್ರದ ಕಂಚಿನ ದೀಪಗಳನ್ನು ಕಳವು ನಡೆಸಿದ್ದಾರೆ. ರಬ್ಬರ್ ತೋಟದ ನಡುವೆ ಇರುವ ಬೃಹತ್ ಮನೆಯವರೆಲ್ಲರೂ ವಿದೇಶದಲ್ಲಿದ್ದು, ಸಂಬಂಧಿಕರು ಎರಡು ದಿನಕ್ಕೊಮ್ಮೆ ಬಂದು ನೋಡಿ ಹೋಗುತ್ತಿದ್ದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:ಕಾಲುವೆ ಜಾಗ ಒತ್ತುವರಿ ಮಾಡಿ ಮನೆ ನಿರ್ಮಾಣ ಆರೋಪ: ಸಚಿವ ಆನಂದ ಸಿಂಗ್ ವಿರುದ್ಧ ದೂರು