ಮಂಗಳೂರು : ಬೆಂಕಿ ಅವಘಡದಲ್ಲಿ ಎರಡು ಅಂಗಡಿಗಳು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ನಗರದ ಸೆಂಟ್ರಲ್ ಮಾರುಕಟ್ಟೆ ಮುಂಭಾಗದ ದುಬೈ ಮಾರ್ಕೆಟ್ನಲ್ಲಿ ಇಂದು ನಸುಕಿನಜಾವ ಸಂಭವಿಸಿದೆ.
ಮಂಗಳೂರು: ಬೆಂಕಿ ಅವಘಡದಿಂದ 2 ಅಂಗಡಿಗಳು ಸಂಪೂರ್ಣ ಭಸ್ಮ - ಬೆಂಕಿ ಅವಘಡ
ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯ ಮುಂಬಾಗದ ದುಬೈ ಮಾರ್ಕೆಟ್ನಲ್ಲಿ ಬೆಂಕಿ ಅವಘಡ ಸಂಭವಿಸಿ ಎರಡು ಅಂಗಡಿಗಳು ಸುಟ್ಟು ಭಸ್ಮವಾಗಿವೆ. ತಡರಾತ್ರಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅವಘಡದಲ್ಲಿ ದುಬೈ ಮಾರುಕಟ್ಟೆಯಲ್ಲಿರುವ ನೆಲ ಮಹಡಿಯ ಫ್ಯಾನ್ಸಿ ಹಾಗೂ ಇಲೆಕ್ಟ್ರಿಕ್ ಅಂಗಡಿಗಳು ಭಸ್ಮವಾಗಿದೆ. ಅಂಗಡಿಯೊಳಗಿನಿಂದ ಹೊಗೆ ಬರುತ್ತಿದ್ದುದನ್ನ ಕಂಡ ಅಲ್ಲಿಯ ಸೆಕ್ಯುರಿಟಿ ಗಾರ್ಡ್ಗಳು ನಸುಕಿನಜಾವ 3.20ರ ಸುಮಾರಿಗೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ.
ಮಂಗಳೂರು ಅಂಗಡಿಗೆ ಬೆಂಕಿ : ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಷ್ಟರಲ್ಲಾಗಲೇ ಎರಡು ಅಂಗಡಿಗಳು ಸಂಪೂರ್ಣ ಸುಟ್ಟುಹೋಗಿದ್ದವು. ಅಂಗಡಿಯ ಮಾಲೀಕರು ಯಾರೆಂದು ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.