ಕರ್ನಾಟಕ

karnataka

ETV Bharat / city

ಮಂಗಳೂರು: ಪ್ರಾರ್ಥನಾ ಮಂದಿರ ಧ್ವಂಸ ಪ್ರಕರಣ, ಇಬ್ಬರ ಬಂಧನ

ಪಂಜಿಮೊಗರು ಉರುಂದಾಡಿ ಗುಡ್ಡೆಯ ಪ್ರಾರ್ಥನಾ ಮಂದಿರವನ್ನು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೂರು ಠಾಣಾ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

two arrested under mangalore prayer hall destroy case
ಪ್ರಾರ್ಥನಾ ಮಂದಿರ ಧ್ವಂಸ ಪ್ರಕರಣದ ಆರೋಪಿಗಳು ಅರೆಸ್ಟ್

By

Published : Feb 22, 2022, 1:21 PM IST

ಮಂಗಳೂರು (ದಕ್ಷಿಣ ಕನ್ನಡ): ನಗರದ ಕೂಳೂರು ಸಮೀಪದ ಪಂಜಿಮೊಗರು ಉರುಂದಾಡಿ ಗುಡ್ಡೆಯ ಪ್ರಾರ್ಥನಾ ಮಂದಿರವನ್ನು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೂರು ಠಾಣಾ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಮಂಗಳೂರಿನ ಬಜ್ಪೆ ನಿವಾಸಿ ಲತೀಶ್(28) ಮತ್ತು ಪಂಜಿಮೊಗರು ಉರುಂದಾಡಿ ಗುಡ್ಡೆಯ ಧನಂಜಯ್(36) ಬಂಧಿತರು. ಸುಮಾರು 40 ವರ್ಷಗಳ ಹಿಂದೆ ಪಂಜಿಮೊಗರು ಉರುಂದಾಡಿಗುಡ್ಡೆ ಎಂಬಲ್ಲಿ ನಿರ್ಮಾಣ ಮಾಡಿದ್ದ ಸಂತ ಅಂತೋನಿ ಹೋಲಿ ಕ್ರಾಸ್ ಪ್ರಾರ್ಥನಾ ಮಂದಿರವನ್ನು ಫೆ.5ರಂದು ಜೆಸಿಬಿಯ ಮೂಲಕ ಕೆಡವಲಾಗಿತ್ತು.

ಇದನ್ನೂ ಓದಿ:ಮಗಳ ಮದುವೆ ದಿನವೇ ತಂದೆಗೆ ಹೃದಯಾಘಾತ : ಕಲ್ಯಾಣ ಕಣ್ತುಂಬಿಕೊಳ್ಳಲು ಬಿಡದ ವಿಧಿ!

ಈ ಬಗ್ಗೆ ಪ್ರಾರ್ಥನಾ ಮಂದಿರದಿಂದ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಇಬ್ಬರು ಆರೋಪಿಗಳನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ

ABOUT THE AUTHOR

...view details