ಕರ್ನಾಟಕ

karnataka

ETV Bharat / city

ದಂಪತಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ: ಮಂಗಳೂರಲ್ಲಿ ಸಿಸಿಬಿ ದಾಳಿ

ಮಂಗಳೂರಿನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ದಂಪತಿಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

two arrested for selling drugs to students in Mangalore
ಮಾದಕ ವಸ್ತು ಮಾರಾಟ

By

Published : Jul 16, 2022, 8:55 PM IST

Updated : Jul 16, 2022, 9:38 PM IST

ಮಂಗಳೂರು(ದಕ್ಷಿಣ ಕನ್ನಡ) : ನಗರದ ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ದಂಪತಿಗಳನ್ನು‌ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಗರದ ಕಾವೂರಿನ ಶಂಕರನಗರದ ಕೆ ಸಿ ಆಳ್ವ ಲೇಔಟ್​​​ನ ವಿಖ್ಯಾತ್ ಅಲಿಯಾಸ್​ ವಿಕ್ಕಿ ಬಪ್ಪಾಲ್ (28), ಆತನ ಪತ್ನಿ ಅಂಜನಾ (21) ಬಂಧಿತರು.

ಇವರು ನಗರದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್ಸ್​ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಪಿಎಸ್ಐ ರಾಜೇಂದ್ರ ಬಿ ಅವರ ನೇತೃತ್ವದ ತಂಡ ದಾಳಿ ಮಾಡಿದೆ. ಆರೋಪಿಗಳಿಂದ ಒಟ್ಟು 2 ಕಿಲೋ 200 ಗ್ರಾಂ ತೂಕದ 22 ಸಾವಿರ ರೂ. ಮೌಲ್ಯದ ಗಾಂಜಾ, 1,500 ರೂ. ನಗದು, ಒಂದು ಮೊಬೈಲ್ ಮತ್ತು ಡಿಜಿಟಲ್ ತೂಕ ಮಾಪನ ವಶಪಡಿಸಿಕೊಂಡಿದ್ದಾರೆ.

ಮಾದಕ ವಸ್ತು ಮಾರಾಟ ಮಾಡುತ್ತಿದ್ದ ದಂಪತಿಗಳ ಬಂಧನ

ಈ ಗಾಂಜಾ ಮಾರಾಟ ಜಾಲದಲ್ಲಿ ಭಾಗಿಯಾಗಿರುವ ಇನ್ನೂ ಹಲವು ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ. ಆರೋಪಿಗಳನ್ನು ಮಾದಕ ವಸ್ತುಗಳ ಸೇವನೆ ಬಗ್ಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಆರೋಪಿ ವಿಖ್ಯಾತ್ ಎಂಬಾತನ ವಿರುದ್ಧ ಈ ಹಿಂದೆ 13 ಪ್ರಕರಣಗಳು ದಾಖಲಾಗಿದ್ದವು. ಆರೋಪಿಗಳ ವಿರುದ್ಧ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ಇದನ್ನೂ ಓದಿ :ತಾಯಿ ಮೇಲೆ ಮಗನ ಕ್ರೌರ್ಯ: ಶೌಚಕ್ಕಾಗಿ ನಿರ್ಮಿಸಿದ ಗುಂಡಿಗೆ ತಳ್ಳಿದ ಕ್ರೂರಿ!

Last Updated : Jul 16, 2022, 9:38 PM IST

ABOUT THE AUTHOR

...view details