ತುಂಬೆ ಡ್ಯಾಂನ ಟ್ರಾನ್ಸ್ ಫಾರ್ಮರ್‌ಗೆ ಸಿಡಿಲು: ಮಂಗಳೂರಿನಲ್ಲಿ ದಿನ ಬಿಟ್ಟು ದಿನ ನೀರು ಸರಬರಾಜು - undefined
ನಗರಕ್ಕೆ ನೀರು ಸರಬರಾಜು ಮಾಡುವ ತುಂಬೆ ವೆಂಟೆಡ್ ಡ್ಯಾಂನ ಟ್ರಾನ್ಸ್ ಫಾರ್ಮರ್‌ಗೆ ಸಿಡಿಲು ಬಡಿದು ಹಾನಿಯಾಗಿದ್ದು, ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ನಗರಕ್ಕೆ ದಿನ ಬಿಟ್ಟು ದಿನ ನೀರು ಸರಬರಾಜು ಆಗಲಿದೆ
![ತುಂಬೆ ಡ್ಯಾಂನ ಟ್ರಾನ್ಸ್ ಫಾರ್ಮರ್‌ಗೆ ಸಿಡಿಲು: ಮಂಗಳೂರಿನಲ್ಲಿ ದಿನ ಬಿಟ್ಟು ದಿನ ನೀರು ಸರಬರಾಜು](https://etvbharatimages.akamaized.net/etvbharat/prod-images/768-512-3554060-thumbnail-3x2-mng.jpg)
ಮಂಗಳೂರಿನಲ್ಲಿ ದಿನ ಬಿಟ್ಟು ದಿನ ನೀರು ಸರಬರಾಜು
ಮಂಗಳೂರು:ನಗರಕ್ಕೆ ನೀರು ಸರಬರಾಜು ಮಾಡುವ ತುಂಬೆ ವೆಂಟೆಡ್ ಡ್ಯಾಂನ ಟ್ರಾನ್ಸ್ ಫಾರ್ಮರ್‌ಗೆ ಸಿಡಿಲು ಬಡಿದು ಹಾನಿಯಾಗಿದ್ದು, ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ನಗರಕ್ಕೆ ದಿನ ಬಿಟ್ಟು ದಿನ ನೀರು ಸರಬರಾಜು ಆಗಲಿದೆ ಎಂದು ಮಹಾನಗರಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಬೆಳಗ್ಗೆ ನಗರದಲ್ಲಿ ಸುರಿದ ಗುಡುಗು ಸಹಿತ ಮಳೆಗೆ ಪಡೀಲ್‌ನಲ್ಲಿರುವ ನೆಲಮಟ್ಟದ ಮುಖ್ಯ ಜನಸಂಗ್ರಹಾಗಾರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಉತ್ತುಂಗ ಸ್ಥಾವರ ನಂಬರ್-2ಕ್ಕೆ ವಿದ್ಯುತ್ ಪೂರೈಕೆ ಮಾಡುವ ಟ್ರಾನ್ಸ್ ಫಾರ್ಮರ್‌ಗೆ ಸಿಡಿಲಿನಿಂದ ಹಾನಿಯಾಗಿದೆ.
ತುಂಬೆ ಡ್ಯಾಂನ ಟ್ರಾನ್ಸ್ ಫಾರ್ಮರ್‌ಗೆ ಸಿಡಿಲು