ಮಂಗಳೂರು (ದಕ್ಷಿಣ ಕನ್ನಡ): ತುಳು ನಾಟಕ ರಂಗದ ಹಿರಿಯ ಕಲಾವಿದ ಜೆ. ಸೀತಾರಾಮ ಶೆಟ್ಟಿ (83) ಅವರು ಇಂದು ಪಚ್ಚನಾಡಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಜೆ. ಸೀತಾರಾಮ ಶೆಟ್ಟಿ ಅವರು ಸುಮಾರು 65 ವರ್ಷಗಳಿಂದ ತುಳು ನಾಟಕ ರಂಗದಲ್ಲಿ ನಟರಾಗಿ, ನಿರ್ದೇಶಕರಾಗಿ, ಸಂಘಟಕರಾಗಿ ಕಲಾ ಸೇವೆಯಲ್ಲಿ ತೊಡಗಿದ್ದರು. ಅವರು ಕೆ.ಎನ್ ಟೇಲರ್ ಅವರ ಗಣೇಶ ನಾಟಕ ಸಭಾದಲ್ಲಿ 48 ವರ್ಷಗಳ ಕಾಲ ಸಕ್ರಿಯ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ:ರಾಮನಗರ: ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ; ಹಲವರಿಗೆ ಉದ್ಯೋಗದ ನಿರೀಕ್ಷೆ
ತಮ್ಮ 80ರ ಹರೆಯದಲ್ಲಿ ಪುರಭವನದಲ್ಲಿ ನಡೆದ ಸೀತಾರಾಮ ಕಾರ್ಯಕ್ರಮದಲ್ಲಿ ಅಭಿಮಾನಿಗಳಿಂದ ಸನ್ಮಾನಿಸಲ್ಪಟ್ಟಿದ್ದರು. ಅವರ ನಿಧನಕ್ಕೆ ತುಳು ನಾಟಕ ಕಲಾವಿದರ ಒಕ್ಕೂಟ, ಕಲಾ ಸಂಗಮ ಮಂಗಳೂರು, ಚಾ ಪರ್ಕ ಕಲಾವಿದರ ತಂಡ, ಲಕುಮಿ ನಾಟಕ ತಂಡ ಸಂತಾಪ ಸೂಚಿಸಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ