ಕರ್ನಾಟಕ

karnataka

By

Published : Oct 31, 2021, 1:29 PM IST

ETV Bharat / city

ಮಕ್ಕಿಮನೆ ಕಲಾವೃಂದದಿಂದ ಆನ್ಲೈನ್ ಮೂಲಕ ಅಪ್ಪುಗೆ ಭಾವಪೂರ್ಣ ನುಡಿನಮನ

ಮಕ್ಕಿಮನೆ ಕಲಾವೃಂದದಿಂದ ದಿ. ಪುನೀತ್ ರಾಜ್‍ಕುಮಾರ್ ಅವರಿಗೆ ಆನ್​ಲೈನ್​​ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ನುಡಿನಮನ ಕಾರ್ಯಕ್ರಮ ಜರಗಿತು.

tribute to actor puneeth rajkumar by makki mane kalavrunda
ಮಕ್ಕಿಮನೆ ಕಲಾವೃಂದದಿಂದ ಆನ್ಲೈನ್ ಮೂಲಕ ಅಪ್ಪುಗೆ ಭಾವಪೂರ್ಣ ನಮನ ಸಲ್ಲಿಕೆ

ಮಂಗಳೂರು: ಕೋಟ್ಯಂತರ ಅಭಿಮಾನಿಗಳ ಮೆಚ್ಚಿನ ನಟ ಪುನೀತ್ ರಾಜ್‍ಕುಮಾರ್ ಅವರಿಗೆ ನಗರದ ಮಕ್ಕಿಮನೆ ಕಲಾವೃಂದದಿಂದ ಆನ್​ಲೈನ್​​ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ನುಡಿನಮನ ಕಾರ್ಯಕ್ರಮ ಜರುಗಿತು. ಈ ಸಂದರ್ಭ ದೇಶ - ವಿದೇಶಗಳ ಗಣ್ಯರು ಅಗಲಿದ ನಟನಿಗೆ ಭಾವಪೂರ್ಣ ನುಡಿನಮನ ಸಲ್ಲಿಸಿದರು.

ಮಕ್ಕಿಮನೆ ಕಲಾವೃಂದದಿಂದ ಆನ್ಲೈನ್ ಮೂಲಕ ಅಪ್ಪುಗೆ ಭಾವಪೂರ್ಣ ನಮನ ಸಲ್ಲಿಕೆ

ಮೂಡಬಿದಿರೆ ಜೈನ ಮಠದ ಪರಮಪೂಜ್ಯ ಭಾರತ ಭೂಷಣ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್, ರಾಜ್ಯ ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಸಂಗೀತ ನಿರ್ದೇಶಕ ವಿ. ಮನೋಹರ್, ತುಳು ರಂಗಭೂಮಿ ಹಾಗೂ ಸಿನಿಮಾ ಕಲಾವಿದರಾದ ಭೋಜರಾಜ್- ವಾಮಂಜೂರು, ಸರ್ವೋತ್ತಮ ಶೆಟ್ಟಿ-ಅಬುಧಾಬಿ, ಸುದೀಪ್ ಹೆಬ್ಬಾರ್-ಅಮೆರಿಕ, ಪ್ರಕಾಶ್ ಸುಬ್ಬಣ್ಣ- ಕೆನಡ, ವಿಜಯಕುಮಾರ್ ಹಲಗಲಿ-ಸಿಡ್ನಿ ಆಸ್ಟ್ರೇಲಿಯಾ, ಸುಬ್ರಹ್ಮಣ್ಯ- ಹ್ಯಾಂಬರ್ಗ್ ಜರ್ಮನಿ, ಸಿಂಧು ಕುಲಾಲ್- ಕೆನಡಾ, ಶ್ರೀನಿವಾಸ್ ಪ್ರಸಾದ್- ಅಮೆರಿಕ, ದಿವ್ಯ-ಆಲೂರು, ರತ್ನ ಶಂಕರ್​​-ಮೈಸೂರು, ಚಿತ್ತಾ ಜಿನೇಂದ್ರ- ಬೆಂಗಳೂರು, ಅರಿಹಂತ್ ಜೈನ್​- ಬೆಂಗಳೂರು, ಎನ್.ಪ್ರಸನ್ನ ಕುಮಾರ್- ಮೈಸೂರು, ಚಿತ್ರಾಲಿ- ಮಂಗಳೂರು, ನಿಹಾಲ್ ಸಾಗರ್- ಬೆಂಗಳೂರು, ಅನುಷ್ಕಾ ಆರ್.ಟಿ- ಧಾರವಾಡ, ಅರ್ಚಿತ್ ಎ ಜೈನ್- ಸಂಸೆ ದಿವಂಗತ ನಟನಿಗೆ ನುಡಿನಮನ ಸಲ್ಲಿಸಿದರು.

ಇದನ್ನೂ ಓದಿ:ಶಾಂತಿಯುತವಾಗಿ ನೆರವೇರಿದ ಪುನೀತ್ ಅಂತ್ಯಕ್ರಿಯೆ: ಸಿಎಂ ಬೊಮ್ಮಾಯಿ ಮೆಚ್ಚುಗೆ

ಮಕ್ಕಿಮನೆ ಕಲಾವೃಂದದ ಸುದೇಶ್ ಜೈನ್ ಮಕ್ಕಿಮನೆ, ನಿರಂಜನ್ ಜೈನ್ ಕುದ್ಯಾಡಿ, ಉಜ್ವಲ್ ಜೈನ್ ಮೇಗುಂದ, ವಜ್ರ ಕುಮಾರ್ ಬೆಂಗಳೂರು, ಪೂಜಾ ಪೈ ಮಂಗಳೂರು ಮತ್ತಿತರರು ನುಡಿನಮನ ಕಾರ್ಯಕ್ರಮದಲ್ಲಿ ಭಾಗವಸಿದ್ದರು. ನೇಹಾ, ನಿತ್ಯ, ಸುಶ್ಮಿತಾ, ನಿಶ್ಚಿತಾ, ಚಿಂತನಾ, ದೇವರಮನೆ ಹೊರನಾಡು ಅವರುಗಳು ಪುನೀತ್ ರಾಜ್​ಕುಮಾರ್​​ ಅವರ ಹಾಡು ಹಾಡಿದರು.

ABOUT THE AUTHOR

...view details